ಆದಷ್ಟು ಬೇಗ ಭಾರತದ ಜೊತೆಗಿನ ಗಡಿ ಬಿಕ್ಕಟ್ಟನ್ನ ಇತ್ಯರ್ಥಗೊಳಿಸುತ್ತೇವೆ: ಚೀನಾ

masthmagaa.com:

ಪೂರ್ವ ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಸಾಧ್ಯವಾದಷ್ಟು ಬೇಗ ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿವೆ. ಏಪ್ರಿಲ್‌ 23ರಂದು ನಡೆದ ಉಭಯ ದೇಶಗಳ 18ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆ ವೇಳೆ ಈ ನಿರ್ಣಯಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ ಅಂತ ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇತ್ತ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಗೆ ಸಂಬಂಧಿಸಿದ ಬಿಕ್ಕಟ್ಟನ್ನ ಬೇಗ ಪರಿಹರಿಸಿಕೊಳ್ಳಲು ಒತ್ತು ನೀಡುವ ವಿಚಾರವನ್ನ ಸಭೆಯಲ್ಲಿ ಚರ್ಚಿಸಲಾಗಿದೆ. ಪರಸ್ಪರ ಸಂಪರ್ಕದಲ್ಲಿದ್ದು, ಸೇನೆ ಹಾಗೂ ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವ ಕುರಿತು ಮಾತುಕತೆ ನಡೆದಿದೆ ಅಂತ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಂದ್ಹಾಗೆ ಉಭಯ ದೇಶಗಳ ನಾಯಕರು ಹಾಗೂ ವಿದೇಶಾಂಗ ಸಚಿವರು ನೀಡಿದ್ದ ಮಾರ್ಗದರ್ಶನದ ಅನುಸಾರ ಮಾತುಕತೆ ನಡೆಸಲಾಗಿದೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply