ಗಡಿಯಲ್ಲಿ ಭಾರತ ಚೀನಾ ಅಧಿಕಾರಿಗಳ ಬಿಸಿ ಬಿಸಿ ಚರ್ಚೆ!

masthmagaa.com:

ಚೀನಾ-ಭಾರತ ನಡುವಿನ ಉದ್ವಿಗ್ನತೆ ಹಸಿಯಾಗಿರೋ ಹೊತ್ತಲ್ಲೇ ಈ ಕಡೆ ಗಡಿಯಲ್ಲಿ ಎರಡೂ ದೇಶಗಳ ನಡುವೆ ಮತ್ತೊಂದು ಸುತ್ತಿನ ಸೇನಾ ಮಾತುಕತೆ ನಡೆದಿದೆ. Daulat Beg Oldie (DBO) ಸೆಕ್ಟರ್‌ನಲ್ಲಿ ಭಾರತ ಹಾಗೂ ಚೀನಾ ಸೇನೆಯ ಮೇಜರ್‌ ಜನರಲ್‌ ಮಟ್ಟದ ಮಾತುಕತೆ ಆಗಿದೆ. ಉಭಯ ದೇಶಗಳ ನಡುವೆ ಕಳೆದ ಮೂರು ವರ್ಷದಿಂದ ಅಂದ್ರೆ ಗಲ್ವಾನ್‌ ಕಣಿವೆಯಲ್ಲಿ ಸಂಘರ್ಷ ಉಂಟಾದ ನಂತರ ಹಲವು ಸುತ್ತಿನ ಮಾತುಕತೆ ನಡೆದಿತ್ತು, ಆದ್ರೆ ಈ ಮಾತುಕತೆ ತುಂಬಾ ಇಂಪಾರ್ಟೆಂಟ್‌ ಅಂತ ಹೇಳಲಾಗ್ತಿದೆ. ಯಾಕಂದ್ರೆ ಕಳೆದ ಕೆಲ ದಿನಗಳ ಹಿಂದೆ ಭಾರತ ಹಾಗೂ ಚೀನಾದ ರಕ್ಷಣಾ ಸಚಿವರ ಭೇಟಿಯಾಗಿತ್ತು. ಅದಾದ ನಂತರ ಭಾರತ ಹಾಗೂ ಚೀನಾದ ವಿದೇಶಾಂಗ ಸಚಿವರು ಮಾತುಕತೆ ಮಾಡಿದ್ರು. ಈ ವೇಳೆ ಗಡಿ ವಿವಾದ ಬಗೆಹರಿಸುವ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗಿತ್ತು. ಅದಾದ ನಂತರ ಈಗ ಮತ್ತೆ ಮೇಜರ್ ಜನರಲ್‌ಗಳ ಮಟ್ಟದ‌ ಮಾತುಕತೆ ನಡೆದಿದೆ. ಅದ್ರೆ ಈ ಸಭೆಯಲ್ಲಿ ಅಂತಿಮ ನಿರ್ಧಾರ ಏನಾಯ್ತು. ಫಲದಾಯಕವಾಗಿತ್ತಾ? ಇಲ್ವಾ ? ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

-masthmagaa.com

Contact Us for Advertisement

Leave a Reply