4ನೇ ಭಾರತ-ಫ್ರಾನ್ಸ್‌ ವಾರ್ಷಿಕ ರಕ್ಷಣಾ ಮಾತುಕತೆ! ಸಭೆಯಲ್ಲಿ ಚರ್ಚಿಸಿದ್ದೇನು?

masthmagaa.com:

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಫ್ರಾನ್ಸ್‌ನ ರಕ್ಷಣಾ ಸಚಿವ ಸೆಬಾಸ್ಟಿಯನ್‌ ಲೆಕೊರ್ನ್ಯು (Sebastien Lecornu) ಅವ್ರನ್ನ ಭೇಟಿಯಾಗಿದ್ದಾರೆ. ಉಭಯ ನಾಯಕರು ಪರಸ್ಪರ ಹಿತಾಸಕ್ತಿ ಜೊತೆಗೆ ಜಾಗತಿಕ, ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನ ಚರ್ಚಿಸಿದ್ದಾರೆ. ವಿಶೇಷವಾಗಿ ಭವಿಷ್ಯದಲ್ಲಿ ಎದುರಾಗೊ ಯುದ್ದಗಳ ಅವಶ್ಯಕತೆಗೆ ಅನುಗುಣವಾಗಿ ಬೇಕಾದ ವಸ್ತುಗಳ ಸಂಶೋಧನೆ, ಅಭಿವೃದ್ದಿ ಹಾಗೂ ಉತ್ಪಾದನೆಗೆ ಸಂಬಂಧಪಟ್ಟ ವಿಷಯದ ಮೇಲೆ ಹೆಚ್ಚು ಫೋಕಸ್‌ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ. ಇತ್ತ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೂಡ ಫ್ರಾನ್ಸ್‌ ಸಚಿವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ʻಮೇಕ್‌ ಇನ್‌ ಇಂಡಿಯಾʼ ಯೋಜನೆ ಮೇಲಿನ ಫೋಕಸ್‌ನೊಂದಿಗೆ ಕೈಗಾರಿಕಾ ಸಹಕಾರ ನೀಡೋದ್ರ ಕುರಿತು ಚರ್ಚಿಸಿದ್ದಾರೆ. ಇನ್ನು ಈ 4ನೇ ಭಾರತ-ಫ್ರಾನ್ಸ್‌ ವಾರ್ಷಿಕ ರಕ್ಷಣಾ ಮಾತುಕತೆ ಸಭೆಯನ್ನ ರಾಜನಾಥ್‌ ಸಿಂಗ್‌ರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

-masthmagaa.com

Contact Us for Advertisement

Leave a Reply