ಭಾರತ ಫ್ರಾನ್ಸ್‌ ನಡುವೆ ಮಹತ್ವದ ಮಾತುಕತೆ! ಏನೇನಿತ್ತು?

masthmagaa.com:

ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್‌ ಕ್ವಾತ್ರ ಪ್ರೆಸ್‌ ಮೀಟ್‌ ನಡೆಸಿದ್ದಾರೆ. ಈ ವೇಳೆ ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರಾನ್‌ ಭೇಟಿ ವೇಳೆ ನಡೆದ ಮಾತುಕತೆಗಳ ಬಗ್ಗೆ ವಿವರ ನೀಡಿದ್ದಾರೆ. ಇದ್ರಲ್ಲಿ ಮುಖ್ಯವಾಗಿ ಉಭಯ ದೇಶಗಳ ರಕ್ಷಣಾ ಪಾಲುದಾರಿಗೆ, ರೊಬೊಟಿಕ್ಸ್‌, AI, ವಾಹನ ಸೆಕ್ಟರ್‌ ಹಾಗೂ ಸೈಬರ್‌ ಸೆಕ್ಯುರಿಟಿ ಬಗ್ಗೆ ಚರ್ಚೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಸದ್ಯದ ಜಿಯೋಪಲಿಟಿಕಲ್‌ ಸಿಚುಯೇಶನ್‌ನಲ್ಲಿ ಮರಿಟೈಮ್‌ ಅಥವಾ ಕಡಲ ತೀರದ ಭದ್ರತೆ, ಸ್ಪೇಸ್‌ ಹಾಗೂ ಲ್ಯಾಂಡ್‌ ವಾರ್‌ಫೇರ್‌ಗೆ ಸಂಬಂಧಪಟ್ಟ ಸಹಕಾರದ ಬಗ್ಗೆ ಮಾತನಾಡಲಾಗಿದೆ. ಭಾರತದ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ಫ್ರಾನ್ಸ್‌ನ ಆರಿಯಾನೆ ಸ್ಪೇಸ್‌ಗಳು‌, ಉಪಗ್ರಹ ಉಡಾವಣೆ ಹಾಗೂ ಅಡ್ವಾನ್ಸ್ಡ್‌ ಸ್ಪೇಸ್‌ ಎಕ್ಸ್‌ಪ್ಲೋರೇಷನ್ನಲ್ಲಿ ಸಹಕಾರ ಬೆಳೆಸೋ MoUಗೆ ಸೈನ್‌ ಮಾಡಿವೆ. ನಾವಿನ್ಯತೆಗೆ ಒತ್ತು ನೀಡೋಕೆ 2026ರನ್ನ ಇಂಡಿಯಾ ಫ್ರಾನ್ಸ್‌ ಇಯಾರ್‌ ಆಫ್‌ ಇನೋವೇಶನ್‌ ಅಂತ ಘೋಷಿಸಲಾಗಿದೆ. ಅಲ್ಲದೆ ಭಾರತೀಯ ವಿದ್ಯಾರ್ಥಿಗಳಿಗೆ ಶೆಂಜೆನ್‌ ವೀಸಾದ ಅವಧಿಯನ್ನ 5 ವರ್ಷಕ್ಕೆ ಎಕ್ಸ್‌ಟೆಂಡ್‌ ಮಾಡೋಕೆ ಫ್ರಾನ್ಸ್‌ ಒಪ್ಕೊಂಡಿದೆ ಅಂತ ವಿನಯ್‌ ಮೋಹನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply