AI ಚಾಟ್‌ಜಿಪಿಟಿ ಬೆಂಬಲಿತ ಭಾರತದ ಮೊದಲ ಚಾಟ್‌ಬಾಟ್‌ ಅಭಿವೃದ್ಧಿ! ಪೂರ್ತಿ ತಿಳಿಯೋಕೆ ಈ ಸ್ಟೋರಿ ನೋಡಿ!

masthmagaa.com:

ಮೈಕ್ರೋಸಾಫ್ಟ್‌ ಬೆಂಬಲಿತ ಓಪನ್‌ AI ಕಂಪನಿ ಅಭಿವೃದ್ಧಿಪಡಿಸಿರೋ ಚಾಟ್‌ಜಿಪಿಟಿ ಜಗತ್ತಿನಾದ್ಯಂತ ಸಖತ್‌ ಸದ್ದು ಮಾಡ್ತಿದೆ. ಇದೀಗ ಭಾರತದಲ್ಲೂ ಕೂಡ ಮೊದಲ ಬಾರಿಗೆ ಚಾಟ್‌ಬಾಟ್‌ ಒಂದನ್ನ ಚಾಟ್‌ಜಿಪಿಟಿ ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಫಿನ್‌ಟೆಕ್‌ ಕಂಪನಿಯಾದ ವೆಲಾಸಿಟಿ, ಲೆಕ್ಸಿ(Lexi) ಅನ್ನೋ ಚಾಟ್‌ಜಿಪಿಟಿ ಅಥ್ವಾ AI ಚಾಟ್‌ಬಾಟ್‌ ಅನ್ನ ಅಭಿವೃದ್ಧಿಪಡಿಸಿದೆ. ಈ ಚಾಟ್‌ಬಾಟ್‌ ಇ-ಕಾಮರ್ಸ್‌ ಸಂಸ್ಥಾಪಕರಿಗೆ ಬ್ಯುಸಿನೆಸ್‌ನ ಇನ್‌ಸೈಟ್‌ ಅನ್ನ ಸರಳ ರೀತಿಯಲ್ಲಿ ನೀಡೋಕೆ ಸಹಾಯ ಮಾಡುತ್ತೆ. ಚಾಟ್‌ಜಿಪಿಟಿ ಜೊತೆಗೆ ಸಂಯೋಜನೆ ಮಾಡಲಾದ ದೇಶದ ಮೊದಲ ಚಾಟ್‌ಬಾಟ್‌ ಬಗ್ಗೆ ಅನೌನ್ಸ್‌ ಮಾಡೋಕೆ ನಾವು ಉತ್ಸುಕರಾಗಿದ್ದೇವೆ ಅಂತ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply