ಗಾಜಾ ಯುದ್ಧ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ಭಾರತ!

masthmagaa.com

ಗಾಜಾ ಯುದ್ಧದ ವಿಚಾರವಾಗಿ ಇದೀಗ ಭಾರತ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ತನ್ನ ಅಭಿಪ್ರಾಯ ನೀಡಿದೆ. ಇತ್ತೀಚೆಗಷ್ಟೇ ಇಸ್ರೇಲ್‌, ಪ್ಯಾಲಸ್ತೀನರ ಹತ್ಯಾಕಾಂಡ ನಡೆಸ್ತಿದೆ ಅನ್ನೋ ಆರೋಪಕ್ಕೆ ಅಂತರಾಷ್ಟ್ರೀಯ ನ್ಯಾಯಾಲಯ ನೀಡಿದ್ದ ಆದೇಶದ ಬಗ್ಗೆ ಭಾರತ ರಿಯಾಕ್ಟ್‌ ಮಾಡಿದೆ. ʻICJ ತೀರ್ಪು ನೀಡಿರೋ ಪ್ರಕರಣವನ್ನ ನಾವು ಗಮನಿಸಿದ್ದೇವೆʼ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯ UNRWA ಏಜೆನ್ಸಿ ಸಿಬ್ಬಂದಿ ಗಾಜಾ ಯುದ್ಧದಲ್ಲಿ ಹಮಾಸ್‌ ಜೊತೆ ಇನ್ವಾಲ್ವ್‌ ಆಗಿರೋ ಆರೋಪ ನಿಜವಾಗಿಯೂ ಬಹಳ ಕಳವಳಕಾರಿ. ಪ್ಯಾಲಸ್ತೀನ್‌ಗೆ ಭಾರತ ಬಹಳ ಮುಖ್ಯವಾದ ಡೆವೆಲಪ್‌ಮೆಂಟ್‌ ಪಾರ್ಟ್‌ನರ್‌. ನಾವು ಅವ್ರಿಗೆ ದ್ವಿಪಕ್ಷೀಯವಾಗಿ ಮತ್ತು ವಿಶ್ವಸಂಸ್ಥೆ ಮೂಲಕ ಸಹಾಯ ನೀಡ್ತಿದ್ದೇವೆ. ಆದ್ರೆ ನಾವು ಭಯೋತ್ಪಾದನೆಯನ್ನ ಎಳ್ಳಷ್ಟೂ ಸಹಿಸಲ್ಲ. ಈ ಬಗ್ಗೆ ವಿಶ್ವಸಂಸ್ಥೆ ಕೈಗೊಂಡಿರೋ ತನಿಖೆಯನ್ನ ನಾವು ಸ್ವಾಗತಿಸ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply