ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನ ಕೆದಕಿದ ಟರ್ಕಿ ಅಧ್ಯಕ್ಷ!

masthmagaa.com:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯ ಕಲಾಪದಲ್ಲಿ ಟರ್ಕಿ ಅಧ್ಯಕ್ಷ ಮತ್ತೆ ಕಾಶ್ಮೀರ ವಿಷಯವನ್ನ ಕೆದಕಿದ್ದಾರೆ. 75 ವರ್ಷಗಳ ಹಿಂದೆಯೇ ಭಾರತ ಮತ್ತು ಪಾಕಿಸ್ತಾನ ತಮ್ಮ ಸಾರ್ವಭೌಮತ್ವ ಹಾಗೂ ಸ್ತಾತಂತ್ರ್ಯವನ್ನ ಕಂಡುಕೊಂಡಿವೆ. ಆದ್ರೆ ಕಾಶ್ಮೀರ ವಿಚಾರದಲ್ಲಿ ಈವರೆಗೂ ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಿಲ್ಲ. ಇದು ಅತ್ಯಂತ ದುರದೃಷ್ಟಕರ ಅಂತ ತಾಯಿಪ್‌ ಎರ್ಡೋಆನ್‌ ಹೇಳಿದ್ದಾರೆ. ಮುಂದುವರೆದು ಮಾತಾಡಿದ ಅವ್ರು, ಕಾಶ್ಮೀರದಲ್ಲಿ ನ್ಯಾಯಯುತವಾಗಿ ಶಾಶ್ವತ ಶಾಂತಿ ನೆಲೆಸಲಿ ಅಂತ ನಾವು ಬಯಸ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆಯೂ UNGA ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಎರ್ಡೋಆನ್‌ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ರು. ಈ ಟರ್ಕಿ ತನ್ನನ್ನ ತಾನು ಮುಸ್ಲಿಂ ದೇಶಗಳ ಬಡಾ ಭಾಯ್ ಅಂತ ಪರಿಗಣಿಸುತ್ತೆ.

-masthmagaa.com

Contact Us for Advertisement

Leave a Reply