ಆರು ಜನರನ್ನ ಹೊತ್ತ ಪ್ಲೇನ್‌! ಅಫ್ಘಾನ್‌ನಲ್ಲಿ ದುರಂತ ಅಂತ್ಯ!

masthmagaa.com:

ಭಾರತದಿಂದ ರಷ್ಯಾ ಕಡೆ ಹಾರಾಟ ನಡೆಸಿದ್ದ ಪ್ಯಾಸೆಂಜರ್‌ ವಿಮಾನವೊಂದು ಅಫ್ಘಾನಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ಅಫ್ಘಾನ್‌ನ ಉತ್ತರ ಭಾಗದಲ್ಲಿರೋ ಬಡಾಕ್ಷನ್‌ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಇದು ಪುಟ್ಟದಾಗಿರೋ ಚಾರ್ಟರ್‌ ಜೆಟ್‌ ಆಗಿದ್ದು, ಇದ್ರಲ್ಲಿ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿ ಇದ್ರು ಅಂತ ಹೇಳಲಾಗಿದೆ. ಅಂದ್ಹಾಗೆ ಈ ವಿಮಾನ ಜನವರಿ 20ರ ರಾತ್ರಿ ವೇಳೆ ಅಫ್ಘಾನ್‌ ರೀಚ್‌ ಆದ್ಮೇಲೆ ಏರ್‌ ಟ್ರಾಫಿಕ್‌ ಕಂಟ್ರೋಲರ್‌ನ ರೆಡಾರ್‌ ಸ್ಕ್ರೀನ್‌ನಲ್ಲಿ ಕಾಣಿಸಿರಲಿಲ್ಲ. ಒಮ್ಮೆಲೆ ಮಾಯಾವಾಯ್ತು ಅಂತ ರಷ್ಯಾದ ಏವಿಯೇಷನ್‌ ಅಧಿಕಾರಿಗಳು ಜನವರಿ 21ರಂದು ಮಾಹಿತಿ ನೀಡಿದ್ರು. ಇನ್ನು ಮೊದಲು ಸಿಕ್ಕ ಮಾಹಿತಿ ಪ್ರಕಾರ ಅಪಘಾತಕ್ಕೆ ಒಳಗಾದ ವಿಮಾನ ಭಾರತಕ್ಕೆ ಸೇರಿದ್ದು ಅಂತ ಹೇಳಲಾಗ್ತಿತ್ತು. ಆದ್ರೆ ಈ ಬಗ್ಗೆ ರಿಯಾಕ್ಟ್‌ ಮಾಡಿದ ಭಾರತೀಯ ಸಿವಿಲ್‌ ಏವಿಯೇಷನ್‌ ಸಚಿವಾಲಯ ಈ ವಿಮಾನ ಯಾವ ದೇಶಕ್ಕೆ ಸೇರಿದ್ದು ಅನ್ನೋ ಗೊಂದಲ ಬಗೆಹರಿಸಿದೆ. ʻಅಫ್ಘಾನ್‌ನಲ್ಲಿ ಅಪಘಾತಕ್ಕೊಳಗಾದ DF-10 (Dassault Falcon) ವಿಮಾನ ಮೊರಾಕೊ ದೇಶಕ್ಕೆ ಸೇರಿದ್ದು, ಭಾರತಕ್ಕಲ್ಲʼ ಅಂತ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply