ಕೆನಡಾ PM ಟ್ರುಡು ಮುಂದೆಯೇ ಮೊಳಗಿದ ಖಲಿಸ್ತಾನಿ ಪರ ಘೋಷಣೆಗಳು!

masthmagaa.com:

ದೇಶದಲ್ಲಿ ರಾಜಕೀಯ ಕಾವು ಹೆಚ್ಚಾಗ್ತಿರೋ ನಡುವೆಯೇ ಅತ್ತ ಅಂತರಾಷ್ಟ್ರೀಯ ರಾಜಕೀಯದಲ್ಲೂ ಕಿಚ್ಚು ಹೊತ್ತುವ ಹಾಗೆ ಕೆನಡಾ ನೋಡ್ಕೊಂಡಿದೆ. ಉಭಯ ದೇಶಗಳ ನಡುವೆ ಕಳೆದ ವರ್ಷ ವ್ಯಾಪಕ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾದ್ರು ಮತ್ತೆ ಬಾಲ ಬಿಚ್ಚಿದೆ. ಖಲಿಸ್ತಾನಿಗಳಿಗೆ ಕುಮ್ಮಕ್ಕು ನೀಡಿದೆ.. ಕೆನಡಾದ ಟೊರೊಂಟೋದಲ್ಲಿ ನಡೆದ ಸಿಖ್ಖರ ಪ್ರಮುಖ ʻಖಾಲ್ಸಾ ದಿನʼದ ಆಚರಣೆ ವೇಳೆ ಖಲಿಸ್ತಾನ್‌ ಪರ ಘೋಷಣೆಗಳು ಮೊಳಗಿವೆ. ಖುದ್ದು ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡು ಅವ್ರೇ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲು ಆರಂಭಿಸೊ ವೇಳೆ ಈ ರೀತಿ ಘೋಷಣೆಗಳನ್ನ ಕೂಗಲಾಗಿದೆ. ಈ ಸಂದರ್ಭದಲ್ಲಿ ಕೆನಡಾದ ವಿರೋಧ ಪಕ್ಷ ಕನ್ಸರ್‌ವೇಟಿವ್‌ ಪಾರ್ಟಿಯ ಪಿಯರೆ ಪೊಯಿಲಿವ್ರೆ ಹಾಗೂ ನ್ಯೂ ಡೆಮಾಕ್ರಟಿಕ್‌ ಪಾರ್ಟಿಯ ನಾಯಕ ಜಗನೀತ್‌ ಸಿಂಗ್‌ ಕೂಡ ಭಾಗಿಯಾಗಿದ್ದಾರೆ… ಖಲಿಸ್ತಾನ ಪರ ಘೋಷಣೆಗಳನ್ನು ಕೂಗದಂತೆ ಜಸ್ಟಿನ್‌ ಟ್ರುಡೊ ನೆರೆದಿದ್ದವರಿಗೆ ತಾಕೀತು ಮಾಡದೇ ನಿಮ್ಮ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧವಿದೆ ಎಂದು ಹೇಳಿರುವುದು, ಕೆನಡಾ ಸರಕಾರ ಖಲಿಸ್ತಾನಿಗಳ ಪರ ಎಂಬ ಸಂದೇಶ ರವಾನಿಸಿದಂತಾಗಿದೆ. ಕೆನಡಾದ ಈ ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೆನಡಾದ ಡೆಪ್ಯುಟಿ ಹೈ ಕಮೀಷನರ್‌ಗೆ ಸಮನ್ಸ್‌ ನೀಡಿ, ತಮ್ಮ ಖಂಡನೆ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply