ಭಾರತ: ಭಯೋತ್ಪಾದನಾ ನಿಗ್ರಹಕ್ಕಾಗಿ ವಿಶ್ವಸಂಸ್ಥೆಗೆ 4.1 ಕೋಟಿ ರೂಪಾಯಿ ದೇಣಿಗೆ

masthmagaa.com:

ಭಯೋತ್ಪಾದನೆ ನಿಗ್ರಹಕ್ಕಾಗಿ ವಿಶ್ವಸಂಸ್ಥೆಯ ಟ್ರಸ್ಟ್ ಫಂಡ್‌ಗೆ 5 ಲಕ್ಷ ಡಾಲರ್‌ ಅಂದ್ರೆ ಸುಮಾರು 4.1 ಕೋಟಿ ರೂಪಾಯಿ ದೇಣಿಗೆಯನ್ನ ಭಾರತ ನೀಡಲಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸದಸ್ಯ ರಾಷ್ಟ್ರಗಳ ಸಾಮರ್ಥ್ಯ ಹೆಚ್ಚಿಸೋ ನಿಟ್ಟಿನಲ್ಲಿ ಬೆಂಬಲದ ರೂಪವಾಗಿ ನೀಡಲಿದೆ ಅಂತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. UNSC ಭಯೋತ್ಪಾದನಾ ನಿಗ್ರಹ ಸಮಿತಿಯ ಸಭೆಯಲ್ಲಿ ಮಾತಾಡಿದ ಜೈಶಂಕರ್‌ ಈ ಘೋಷಣೆಯನ್ನ ಮಾಡಿದ್ದಾರೆ. ಜೊತೆಗೆ UNSC ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಭಯೋತ್ಪಾದನೆ ಜಾಗತಿಕ ಬೆದರಿಕೆಯಾಗಿ ಬೆಳೆಯುತಿದೆ ಅದ್ರಲ್ಲೂ ಏಷ್ಯ ಮತ್ತು ಆಫ್ರಿಕಾಗಳಲ್ಲಿ ಹೆಚ್ಚಾಗುತ್ತಿದೆ ಅಂತ ಜೈಶಂಕರ್‌ ಹೇಳಿದ್ದಾರೆ. ಅಂದ್ಹಾಗೆ UNSC ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆಯನ್ನು ಭಾರತ ಆಯೋಜಿಸಿದೆ.

-masthmagaa.com

Contact Us for Advertisement

Leave a Reply