ರಷ್ಯಾ ವಿಚಾರದಲ್ಲಿ ಅಮೆರಿಕಗೆ ತಿರುಗೇಟು ಕೊಟ್ಟ ಭಾರತ!

masthmagaa.com:

ರಷ್ಯಾದಿಂದ ಹೆಚ್ಚು ತೈಲವನ್ನ ಆಮದು ಮಾಡಿಕೊಳ್ಳೋದು ಭಾರತದ ಹಿತಾಸಕ್ತಿಗೆ ಒಳ್ಳೇದಲ್ಲ ಅಂತೇಳಿದ ಅಮೆರಿಕಗೆ ಭಾರತ ತಿರುಗೇಟು ಕೊಟ್ಟಿದೆ. ಭಾರತ ರಷ್ಯಾದಿಂದ ಒಂದು ತಿಂಗಳಲ್ಲಿ ಖರೀದಿಸೋ ತೈಲವನ್ನ ಯುರೋಪ್‌ ಒಂದು ಮಧ್ಯಾಹ್ನಕ್ಕೆ ಖರೀದಿಸುತ್ತೆ ಅಂತ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಅಮೆರಿಕದೊಂದಿಗೆ 2+2 ಮಾತುಕತೆ ನಂತ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವ್ರು, ಪತ್ರಕರ್ತರೊಬ್ರು ಭಾರತ ರಷ್ಯಾದದಿಂದ ತೈಲ ಖರೀದಿ ಮಾಡ್ತಾ ಇರೋದ್ರ ಬಗ್ಗೆ ಪ್ರಶ್ನಿಸಿದಾಗ ಈ ರೀತಿ ಹೇಳಿದ್ದಾರೆ. ಇನ್ನು ಇದಕ್ಕೂ ಮೊದ್ಲು ಹೇಳಿಕೆ ನೀಡಿದ ಜೈಶಂಕರ್​, ಯುಎಸ್​ ಸೆಕ್ರಟರಿ ಬ್ಲಿಂಕೆನ್‌ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚು ಯುಕ್ರೇನ್‌ ಬಗ್ಗೆ ಚರ್ಚೆ ಆಯ್ತು ಅಂತ ಹೇಳಿದ್ರು. ಜೊತೆಗೆ ವ್ಯಾಪಾರ ಮತ್ತು ಹೂಡಿಕೆ ಕೂಡ ನಿಧಾನವಾಗಿ ಬೆಳಿತಾ ಇವೆ. ಹಾಗೆ ರಕ್ಷಣಾ ಕ್ಷೇತ್ರದಲ್ಲೂ ಕೂಡ ಉಭಯ ದೇಶಗಳ ಮೈತ್ರಿ ಹೆಚ್ತಾ ಇದೆ. ವಿಶೇಷವಾಗಿ ಕೌಂಟರ್‌ಟೆರರಿಸಂ ಮತ್ತು ಮ್ಯಾರಿಟೈಮ್‌ ಸೆಕ್ಯುರಿಟಿಯಲ್ಲಿ ಒಳ್ಳೆ ಹೆಜ್ಜೆ ಇಡ್ತಾ ಇದ್ದೇವೆ ಅಂತ ಹೇಳಿದ್ರು. ಇನ್ನು ಆ ಕಡೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಮೆರಿಕದ ಸೆಕ್ರಟರಿ ಆಫ್‌ ಡಿಫೆನ್ಸ್‌ ಲಾಯ್ಡ್‌ ಆಸ್ಟಿನ್‌ ಜೊತೆ ಮಾತುಕತೆ ನಡೆಸಿದ್ರು. ನಂತ್ರ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಉಭಯ ನಾಯಕರು ರಕ್ಷಣಾ ಕ್ಷೇತ್ರದಲ್ಲಿ ಎರಡೂ ದೇಶಗಳ ಮೈತ್ರಿಯನ್ನ ಪರಿಶೀಲನೆ ಮಾಡಿದ್ರು ಅಂತ ಹೇಳಲಾಯ್ತು.
ಇನ್ನು ಇದೇ ಸಮಯದಲ್ಲಿ ಅಮೆರಿಕದ ಸೆಕ್ರಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌, ಭಾರತದಲ್ಲಿ ನಡೀತಾ ಇರೋ ಮಾನವ ಹಕ್ಕುಗಳ ಉಲ್ಲಂಘನೆಯನ್ನ ಮಾನಿಟರ್‌ ಮಾಡ್ತಾ ಇದ್ದೀವಿ ಅಂತ ಹೇಳಿದ್ದಾರೆ. ಹೀಗೆ ನೇರವಾಗಿ ಮೈತ್ರಿ ದೇಶಗಳು ಕಮೆಂಟ್‌ ಮಾಡೋದು ಕಡಿಮೆ, ಆದ್ರೂ ಕೂಡ ಬ್ಲಿಂಕನ್‌ ಈ ಬಗ್ಗೆ ಜಾಸ್ತಿ ವಿಸ್ತಾರವಾಗಿ ಮಾತಾಡಿಲ್ಲ. ಆ ನಂತ್ರ ಮಾತಾಡಿದ ಜೈಶಂಕರ್‌ ಮತ್ತು ರಾಜನಾಥ್‌ ಸಿಂಗ್‌ ಕೂಡ ಈ ವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply