ಜೈಸ್ವಾಲ್‌ ದ್ವಿಶತಕ: ಇಂಗ್ಲೆಂಡ್‌ ಆಲ್‌ಔಟ್‌, ಬುಮ್ರಾಗೆ 6 ವಿಕೆಟ್!

masthmagaa.com:

ಭಾರತ-ಇಂಗ್ಲೆಂಡ್‌ ನಡುವಿನ ದ್ವಿತೀಯ ಟೆಸ್ಟ್‌ನ 2ನೇ ದಿನ ಭಾರತದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ತಮ್ಮ ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ಮೊದಲ ಇನ್ಸಿಂಗ್ಸ್‌ನಲ್ಲಿ ಭಾರತ 396 ರನ್‌ ದಾಖಲಿಸಿದೆ. ಬಳಿದ ಬ್ಯಾಟ್‌ ಮಾಡಲು ಪರದಾಡಿದ ಆಂಗ್ಲ ಪಡೆ 256 ರನ್‌ಗೆ ಆಲ್‌ ಔಟ್‌ ಆಗಿದೆ. ಭಾರತದ ಪರ ಜಸ್ಪ್ರಿತ್‌ ಬುಮ್ರಾ 6 ವಿಕೆಟ್‌ ಪಡೆದು ಮಿಂಚಿದ್ದಾರೆ. ಇನ್ನು ದ್ವಿತೀಯ ಇನ್ನಿಂಗ್ಸ್‌ ಶುರು ಮಾಡಿರೋ ಟೀಮ್‌ ಇಂಡಿಯಾ ದಿನದ ಆಟ ಮುಗಿದಾಗ ಯಾವ್ದೇ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಕಲೆಹಾಕಿದೆ. ಈ ಮೂಲಕ 171 ರನ್‌ಗಳ ಮುನ್ನಡೆ ಸಾಧಿಸಿದೆ.

-masthmagaa.com

Contact Us for Advertisement

Leave a Reply