ಅಂತಿಮ ಟೆಸ್ಟ್:‌ ಇಂಗ್ಲೆಂಡ್‌ಗೆ ಮುಖಭಂಗ, ಇತಿಹಾಸ ಸೃಷ್ಟಿಸಿದ ಭಾರತ

masthmagaa.com:

ಧರ್ಮಶಾಲದಲ್ಲಿ ನಡೆದ ಭಾರತ ಇಂಗ್ಲೆಂಡ್‌ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಇನ್ನಿಂಗ್ಸ್‌ ಹಾಗೂ 64ರನ್‌ಗಳಿಂದ ಭಾರತ ಗೆದ್ದು ಬೀಗಿದೆ. ಮೂರನೇ ದಿನದಾಟದಲ್ಲಿ ಮೊದಲು ಭಾರತ ಆಡಿದ ಏಕೈಕ ಇನ್ನಿಂಗ್ಸ್‌ನಲ್ಲಿ 477ರನ್‌ಗಳಿಗೆ ಆಲೌಟ್‌ ಆಯ್ತು. 259ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಇಂಗ್ಲೆಂಡ್‌ 195ರನ್‌ಗಳಿಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಪರ ಜೋ ರೂಟ್‌ ಒಬ್ರೇ 84 ರನ್‌ ಗಳಿಸಿ ಸ್ವಲ್ಪ ಹೋರಾಟ ಕೊಟ್ಟಿದ್ದಾರೆ. ಅಶ್ವಿನ್‌ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದಾರೆ. ಬ್ಯಾಟಿಂಗ್‌ ಬೌಲಿಂಗ್‌ನಲ್ಲಿ ಮ್ಯಾಜಿಕ್‌ ಮಾಡಿದ ಕುಲ್ದೀಪ್‌ ಪ್ಲೇಯರ್‌ ಆಫ್ ದ ಮ್ಯಾಚ್‌ ಆದ್ರೆ, ಯಶಸ್ವಿ ಜೈಸ್ವಲ್‌ ಪ್ಲೇಯರ್‌ ಆಫ್‌ ದ ಸೀರೀಸ್‌ ಆಗಿದ್ದಾರೆ.‌ ಜೈಸ್ವಲ್‌ ಸೀರೀಸ್‌ನಲ್ಲಿ 712ರನ್‌ ಗಳಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ವಿಶೇಷ ಅಂದ್ರೆ ಬರೋಬ್ಬರಿ 112 ವರ್ಷಗಳ ನಂತರ ಪಂದ್ಯವೊಂದು ಮೊದಲನೇ ಟೆಸ್ಟ್‌ ಸೋತು ನಂತರ ಸತತ 4 ಟೆಸ್ಟ್‌ಗಳನ್ನ ಗೆದ್ದಿದೆ. ಈ ಮೊದಲು 1912ರಲ್ಲಿ ಇಂಗ್ಲೆಂಡೇ ಈ ಸಾಧನೆ ಮಾಡಿತ್ತು. ಇನ್ನು ಸರಣಿಯನ್ನ 4-1ರಲ್ಲಿ ಗೆದ್ದ ಭಾರತ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ 64.58 ಪರ್ಸೆಂಟೇಜ್‌ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಎಂಟನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಈ ಪಂದ್ಯ ಮುಗಿದ ಬೆನ್ನಲ್ಲೇ BCCI ಟೆಸ್ಟ್‌ ಕ್ರಿಕೆಟ್‌ ಆಟಗಾರರಿಗೆ ಗಿಫ್ಟ್‌ ನೀಡಿದೆ. ಇನ್ಮುಂದೆ ಪ್ರತಿ ಟೆಸ್ಟ್‌ ಪಂದ್ಯಕ್ಕೆ ಆಟಗಾರರಿಗೆ ಹೆಚ್ಚುವರಿಯಾಗಿ ಬರೋಬ್ಬರಿ 45 ಲಕ್ಷ ರೂಪಾಯಿ ಇನ್ಸೆಂಟಿವ್‌ ಕೊಡೋಕೆ ತೀರ್ಮಾನ ಮಾಡಲಾಗಿದೆ. ಟೆಸ್ಟ್‌ ಕ್ರಿಕೆಟ್‌ಗೆ ಆಟಗಾರರು ಆದ್ಯತೆ ಕೊಡ್ಲಿ ಅಂತ ಈ ʻಟೆಸ್ಟ್‌ ಕ್ರಿಕೆಟ್‌ ಇನ್ಸೆಂಟಿವ್‌ ಸ್ಕೀಮ್‌ʼನ್ನ ತರಲಾಗಿದೆ. ಇದ್ರಲ್ಲೂ ಒಂದು ಕಂಡೀಶನ್ ಇದೆ. ಅದೇನಂದ್ರೆ ವರ್ಷಕ್ಕೆ 75% ಟೆಸ್ಟ್‌ ಪಂದ್ಯಗಳನ್ನ ಆಡೋ ಆಟಗಾರರು ಮಾತ್ರ ಇದಕ್ಕೆ ಎಲಿಜಬಲ್‌ ಆಗ್ತಾರೆ. ಅಂದ್ರೆ ವರ್ಷಕ್ಕೆ 4 ಪಂದ್ಯ ಆಯೋಜಿಸಿದ್ರೆ, 3 ಪಂದ್ಯ ಆಡಿದ್ಮೇಲೆ ಈ ಇನ್ಸೆಂಟಿಗ್‌ಗೆ ಆಟಗಾರರು ಎಲಿಜಬಲ್‌ ಆಗ್ತಾರೆ.‌ ಸದ್ಯ ಪುರುಷರ ಸೀನಿಯರ್‌ ತಂಡಕ್ಕೆ ಮಾತ್ರ ಈ ಇನ್ಸೆಂಟಿವ್‌ ಸ್ಕೀಮ್‌ ಅಪ್ಲೈ ಆಗಲಿದೆ.

-masthmagaa.com

Contact Us for Advertisement

Leave a Reply