ರೋಹಿತ್‌ಗೆ ಕೋವಿಡ್‌ ಬೆನ್ನಲ್ಲೇ ಮಯಾಂಕ್‌ಗೆ ಬುಲಾವ್‌ ನೀಡಿದ ಬಿಸಿಸಿಐ!

masthmagaa.com:

ಇತ್ತೀಚೆಗೆ ತಾನೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಕೋವಿಡ್‌ಗೆ ಒಳಗಾಗಿದ್ರು. ಹೀಗಾಗಿ ಅವ್ರು ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯೋದು ಡೌಟ್‌ ಅಂತ ಹೇಳಲಾಗ್ತ ಇತ್ತು. ಇದ್ರ ಬೆನ್ನಲ್ಲೇ ಇದೀಗ ಯಾವದಕ್ಕೂ ರಿಸ್ಕ್‌ ಬೇಡ ಅಂತ ಬಿಸಿಸಿಐ ಆರಂಭಿಕ ಆಟಗಾರ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಅವ್ರಿಗೆ ಇಂಗ್ಲೆಂಡ್‌ಗೆ ಬರಲು ಹೇಳಿದೆ. ಒಟ್ನಲ್ಲಿ ಭಾರತದ ಟೆಸ್ಟ್‌ ತಂಡದ ಓಪನಿಂಗ್‌ ಸ್ಥಾನಕ್ಕೆ ಸರಣಿಯಿಂದ ಸರಣಿಗೆ ಮ್ಯೂಸಿಕಲ್‌ ಚೇರ್‌ ಸ್ಪರ್ಧೆ ನಡೀತಿದೆ. ಅತ್ತ ರೋಹಿತ್‌ ಅಲಭ್ಯರಾದ್ರೆ ಯಾರನ್ನ ಕ್ಯಾಪ್ಟನ್‌ ಮಾಡೋದು ಅಂತ ಕೂಡ ಪ್ರಶ್ನೆ ಎದ್ದಿದೆ.

-masthmagaa.com

Contact Us for Advertisement

Leave a Reply