ದೇಶದ ಅಣುವಿದ್ಯುತ್‌ ಕ್ಷೇತ್ರಕ್ಕೂ ಖಾಸಗೀಯವರ ಹೂಡಿಕೆ?

masthmagaa.com:

ಮಹತ್ವದ ಬೆಳವಣಿಗೆಯಲ್ಲಿ, ಇದೇ ಮೊದಲ ಬಾರಿಗೆ ದೇಶದ ಅಣುವಿದ್ಯುತ್‌ ಕ್ಷೇತ್ರದಲ್ಲಿ ಖಾಸಗೀ ಹೂಡಿಕೆ ಮಾಡಿಸೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ಹೆಚ್ಚು ಹೆಚ್ಚು ಕರೆಂಟ್ ಪ್ರೊಡಕ್ಷನ್‌ ಮಾಡೋ ಉದ್ದೇಶದಿಂದ ಈ ಕ್ರಮ ಅಂತ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ರಾಯಿಟರ್ಸ್‌ ರಿಪೋರ್ಟ್‌ ಮಾಡಿದೆ. ಸಧ್ಯ ಈ ಹೂಡಿಕೆಯ ಮೌಲ್ಯ ಭರ್ತಿ 26 ಬಿಲಿಯನ್‌ ಡಾಲರ್‌ ಅಂದ್ರೆ 2,15,800 ಕೋಟಿ ರೂಪಾಯಿ ಅಂತ ಹೇಳಲಾಗ್ತಿದೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರ ಟಾಪ್‌ 5 ಕಂಪನಿಗಳ ಜೊತೆಗೆ ಮಾತುಕತೆ ಮಾಡ್ತಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಪವರ್‌, ಅದಾನಿ ಪವರ್‌, ವೇದಂತಾ ಲಿಮಿಟೆಡ್‌ ಜೊತೆ ಮಾತುಕತೆ ನಡೆಸಲಾಗ್ತಿದೆ. ಈ ಸಂಸ್ಥೆಗಳು ತಲಾ 5.3 ಬಿಲಿಯನ್‌ ಡಾಲರ್‌ ಹಣ ಹೂಡೋ ಯೋಚನೆಯಲ್ಲಿವೆ. ಸಧ್ಯ ಭಾರತ ಸರ್ಕಾರ 2040ರ ಹೊತ್ತಿಗೆ ಕೇವಲ ಅಣುವಿದ್ಯುತ್‌ನಿಂದಲೇ 11 ಸಾವಿರ ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡೋ ಗುರಿ ಹೊದಿದೆ. ಭಾರತದಲ್ಲಿ ಈಗ ನಾನ್‌ ಕಾರ್ಬನ್‌ ಎಜರ್ಜಿ ಅಂದ್ರೆ ಕಾರ್ಬನ್‌ ಇಲ್ಲದೇ ಇರೋ ಇಂಧನದ ಪಾಲು ಕೇವಲ 2 ಪರ್ಸೆಂಟ್‌ ಇದೆ. ಇದನ್ನ 2030ರ ವೇಳೆಗೆ 50 ಪರ್ಸೆಂಟ್‌ಗೆ ಏರಿಸೋ ಯೋಜನೆ ಇದ್ದು ಈ ನಿಟ್ಟಿನಲ್ಲಿ ಇದು ಮಹತ್ವ ಪಡ್ಕೋತಿದೆ. ಇನ್ನು ಅಣುವಿದ್ಯುತ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡೋಕೆ ಕೆಲವೊಂದು ನೀತಿ ನಿಯಮಗಳು ಅಡ್ಡಬರ್ತಿದ್ವು. ಯಾಕಂದರೆ ಇದು ಸೂಕ್ಷ್ಮ ಮತ್ತು ರಕ್ಷಣಾ ವಿಚಾರ…ಹೀಗಾಗಿ ಖಾಸಗೀಯವರಿಗೆ ಅವಕಾಶ ಇರಲಿಲ್ಲ. ಒಂದು ವೇಳೆ ಖಾಸಗೀಯವರು ಬರಬೇಕು ಅಂದ್ರೆ 1962ರ ಅಟೊಮಿಕ್‌ ಎನರ್ಜಿ ಆಕ್ಟ್‌ಗೆ ತಿದ್ದುಪಡಿ ತರಬೇಕಾಗುತ್ತೆ ಅಂತ ಹೇಳ್ತಾ ಇದ್ರು. ಆದ್ರೆ ಈಗ ಅದರ ಅಗತ್ಯ ಏನಿಲ್ಲ ಅಂತ ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ. ಆದ್ರೂ ಅಣುಶಕ್ತಿ ಇಲಾಖೆಯಿಂದ ಅಂತಿಮ ಒಪ್ಪಿಗೆ ಇನ್ನೂ ಸಿಗಬೇಕು ಅಂತ ಕೂಡ ಮೂಲಗಳು ಮಾಹಿತಿ ಹಂಚಿಕೊಂಡಿವೆ.

-masthmagaa.com

Contact Us for Advertisement

Leave a Reply