ಅಮೆರಿಕಾದಲ್ಲಿ ಕೇರಳ ಮೂಲದ ನಾಲ್ವರು ಭಾರತೀಯರ ಶವ ಪತ್ತೆ!

masthmagaa.com:

ಕೇರಳ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಸ್ಯಾನ್‌ ಮಟೇಯೋನಲ್ಲಿ ಈ ಪ್ರಕರಣ ವರದಿಯಾಗಿದೆ. ಕುಟುಂಬಸ್ಥರ ಸಂಬಂಧಿಕರು ಕರೆ ಮಾಡಿದಾಗ ಯಾರೂ ರಿಸೀವ್ ಮಾಡದ ಕಾರಣ ಅವ್ರು ಮನೆಗೆ ಬಂದಿದ್ದಾರೆ. ಈ ವೇಳೆ 42 ವರ್ಷದ ಆನಂದ್‌ ಸುಜಿತ್‌ ಹೆನ್ರಿ ಹಾಗೂ 40 ವರ್ಷದ ಅಲೈಸ್‌ ಪ್ರಿಯಾಂಕ ಬೆಂಜಿಗರ್‌ ಹಾಗೂ ಅವರ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ದಂಪತಿ ಮೈ ಮೇಲೆ ಗುಂಡಿನ ಗುರುತುಗಳು ಕಂಡುಬಂದಿವೆ. ಇನ್ನು ಈ ಸಾವಿನ ಬಗ್ಗೆ ಪೋಲಿಸರು ತನಿಖೆ ಆರಂಭಿಸಿದ್ದು, ಇದು ಸಂಭವನೀಯ ಕೊಲೆ ಹಾಗೂ ಆತ್ಮಹತ್ಯೆ ಆಗಿರಬೋದು ಅಂತ ಪೊಲೀಸರು ಶಂಕಿಸಿದ್ದಾರೆ.

-masthmagaa.com

Contact Us for Advertisement

Leave a Reply