ಅಮೆರಿಕದಲ್ಲಿ ಹಿಂದೂಗಳ ಮೇಲೆ ಹಲ್ಲೆ: ಕಳವಳ ವ್ಯಕ್ತಪಡಿಸಿದ ಸಂಸದರು!

masthmagaa.com:

ಅಮೆರಿಕದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗ್ತಿರೊ ವಿಚಾರವಾಗಿ ಭಾರತ ಮೂಲದ ಅಮೆರಿಕನ್ ಸಂಸದರು ಕಳವಳ ವ್ಯಕ್ತಪಡಿಸಿ ಅಮೆರಿಕ ಸರ್ಕಾರಕ್ಕೆ ಮನವಿಯೊಂದನ್ನ ಸಲ್ಲಿಸಿದ್ದಾರೆ. ಅಮೆರಿಕದಲ್ಲಿ ಹಿಂದೂಗಳು ಹಾಗೂ ದೇವಾಲಯಗಳ ಮೇಲಿನ ವಿಧ್ವಂಸಕ ದಾಳಿಗಳ ವಿಚಾರವಾಗಿ ಅಲ್ಲಿನ ಕಾನೂನು ಇಲಾಖೆ ಹಾಗೂ ಫೆಡೆರಲ್‌ ಬ್ಯೂರೋ ಆಫ್‌ ಇನ್ವೇಷ್ಟಿಕೇಶನ್‌ಗೆ ಬ್ರಿಫಿಂಗ್‌ ನಡೆಸುವಂತೆ ಈ ಸಂಸದರು ಒತ್ತಾಯಿಸಿದ್ದಾರೆ. (ಬ್ರಿಫಿಂಗ್‌ ಅಂದ್ರೆ ಯಾವುದೇ ಕೆಲ್ಸ ಮಾಡೊ ಮುಂಚೆ ಅದ್ರ ಬಗ್ಗೆ ಸಂಬಂಧಿಸಿದವ್ರಿಗೆ ಮಾಹಿತಿ ನೀಡೊದು) ನ್ಯೂಯಾರ್ಕ್‌, ಕ್ಯಾಲಿಪೋರ್ನಿಯಾಗಳಲ್ಲಿ ನಡೆದ ಮಂದಿರಗಳ ಮೇಲಿನ ದಾಳಿಗಳು ಅಮೆರಿಕನ್ ಹಿಂದೂಗಳಲ್ಲಿ ಸಾಮೂಹಿಕ ಆತಂಕವನ್ನ ಹೆಚ್ಚಿಸಿವೆ. ಹೀಗಾಗಿ ಹಿಂದೂ ಸಮುದಾಯದ ಜನ ಹಾಗೂ ದೇವಾಲಯಗಳಿಗೆ ಸೂಕ್ತ ರಕ್ಷಣೆ ನೀಡಿ ಅಂತೇಳಿ ಈ ಸಂಸದರು ಸಹಾಯಕ ಅಟಾರ್ನಿ ಜನರಲ್‌ ಕ್ರಿಷ್ಟನ್‌ ಕ್ಲಾರ್ಕ್‌ಗೆ ಪತ್ರ ಬರೆದು ಮನವಿ ಮಾಡ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply