ಯುಟ್ಯೂಬ್‌ಗೆ ಭಾರತ ಮೂಲದ ನೀಲ್‌ ಮೋಹನ್‌ CEO!

masthmagaa.com:

ವಿಶ್ವದ ಅತಿದೊಡ್ಡ ಆನ್‌ಲೈನ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿರೊ ಯುಟ್ಯೂಬ್‌ನ ನೂತನ ಸಿಇಒ ಆಗಿ ಭಾರತ ಮೂಲದ ನೀಲ್‌ ಮೋಹನ್‌ ನೇಮಕಗೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಯುಟ್ಯೂಬ್‌ನ ಸಿಇಒ ಆಗಿದ್ದ ಸುಸಾನ್‌ ಸಿಇಒ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇವರ ಸ್ಥಾನಕ್ಕೆ 2015ರಿಂದ ಕಂಪನಿಯ ಮುಖ್ಯ ಪ್ರಾಡಕ್ಟ್‌ ಅಧಿಕಾರಿಯಾಗಿದ್ದ ನೀಲ್ ಮೋಹನ್ ಆಯ್ಕೆಯಾಗಿದ್ದಾರೆ. ಇನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್, ಗೂಗಲ್‌ ಹಾಗೂ ಅಲ್ಫಾಬೆಟ್‌ನ ಸಿಇಒ ಸುಂದರ್‌ ಪಿಚೈ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಸೇರಿದಂತೆ ವಿಶ್ವದ ಅನೇಕ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಪ್ರಸ್ತುತ ಭಾರತೀಯ ಮೂಲದವರೇ ನಡೆಸುತ್ತಿದ್ದಾರೆ. ಇದೀಗ ಇವರ ಸಾಲಿಗೆ ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿರೊ ಮೋಹನ್‌ ಕೂಡ ಸೇರಿದ್ದಾರೆ. ಇನ್ನು ಸುಸಾನ್‌ ಅವರು ಈ ಮೊದಲು ಗೂಗಲ್‌ನ ಆಡ್‌ ಪ್ರಾಡಕ್ಟ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ರು. ಬಳಿಕ 2014ರಲ್ಲಿ ಯುಟ್ಯೂಬ್‌ ಸಿಇಒ ಆಗಿ ನೇಮಕಗೊಂಡಿದ್ರು. ಇನ್ನು ಗೂಗಲ್‌ ಯುಟ್ಯೂಬ್‌ನ್ನ ಖರೀದಿ ಮಾಡುವಲ್ಲಿಯೂ ಸುಸಾನ್‌ ಮಹತ್ವದ ಪಾತ್ರ ವಹಿಸಿದ್ದಾರೆ. ಇನ್ನು ಇವರ ಅವಧಿಯಲ್ಲಿ ಯುಟ್ಯೂಬ್‌ನ ಆದಾಯ 29 ಬಿಲಿಯನ್ ಡಾಲರ್‌ ಅಂದ್ರೆ ಸುಮಾರು 2.37 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಹಾಗೂ ಸಕ್ರಿಯ ಬಳಕೆದಾರರ ಸಂಖ್ಯೆ 250 ಕೋಟಿಗೂ ಮೇಲಿದೆ.

-masthmagaa.com

Contact Us for Advertisement

Leave a Reply