ಅಸ್ಸಾಂನಲ್ಲಿ ಭಾರಿ ಮಳೆಗೆ ಸಿಲುಕಿದ್ದ 500 ಪ್ರವಾಸಿಗರನ್ನು ರಕ್ಷಿಸಿದ ಸೇನೆ!

masthmagaa.com:

ಅಸ್ಸಾಂನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದ್ರಿಂದ ಸಿಕ್ಕಿಂನ ಲಾಚುಂಗ್ ಮತ್ತು ಲಾಚೆನ್ ಕಣಿವೆಗೆ ಪ್ರಯಾಣಿಸುತ್ತಿದ್ದ 500 ಪ್ರವಾಸಿಗರನ್ನ ರಕ್ಷಿಸಲಾಗಿದೆ ಅಂತ ಸೇನೆ ಹೇಳಿದೆ. ಭೂಕುಸಿತದಿಂದ ರೋಡ್‌ಗಳು ಬ್ಲಾಕ್‌ ಆಗಿ ಚುಂಗ್‌ಥಾಂಗ್‌ನಲ್ಲಿ ಪ್ರವಾಸಿಗರು ಸಿಲುಕಿಕೊಂಡಿದ್ದರು. ಇದೀಗ ಅವರನ್ನ ರಕ್ಷಿಸಲಾಗಿದ್ದು, ಮೂರು ಸೇನಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಸಿಗರ ಚಿಕಿತ್ಸೆಗಾಗಿ ಮೂರು ವೈದ್ಯಕೀಯ ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply