ಗಿಫ್ಟ್‌ ಸಿಟಿಯ IFSC ಮೂಲಕ ಅಂತರಾಷ್ಟ್ರೀಯ ಎಕ್ಸ್‌ಚೇಂಜ್‌ಗಳಲ್ಲಿ ಹೂಡಿಕೆ?

masthmagaa.com:

ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ, ತನ್ನ ವಿದೇಶಿ ವಿನಿಮಯ ನಿರ್ವಹಣೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನ ತಂದಿದೆ. ಭಾರತದ ಕಂಪನಿಗಳ ಈಕ್ವಿಟಿ ಷೇರ್‌ಗಳನ್ನ ಇದೀಗ ಅಂತರಾಷ್ಟ್ರೀಯ ವಿನಿಮಯ ಯೋಜನೆಗಳಲ್ಲಿ ಅಥ್ವಾ ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್‌ ಮಾಡ್ಬೋದು. ಗುಜರಾತ್‌ನ GIFT ಸಿಟಿಯಲ್ಲಿರೋ International Financial Services Centre ಅಥ್ವಾ IFSC ಮೂಲಕ ಕಂಪನಿಗಳು ತಮ್ಮ ಸೆಕ್ಯೂರಿಟಿಗಳನ್ನ ಲಿಸ್ಟ್‌ ಮಾಡ್ಬೋದು. ಕೆಲವು ಆಯ್ದ ಅಥ್ವಾ ಅನುಮತಿ ಇರೋ ಮಾರ್ಕೆಟ್‌ಗಳಲ್ಲಿ ಲಿಸ್ಟ್‌ ಮಾಡೋಕೆ SEBI ಕೆಲವು ದಿನಗಳಲ್ಲೇ ಗೈಡ್‌ಲೈನ್ಸ್‌ ನೀಡಲಿದೆ. ಈ ಮೂಲಕ ಭಾರತೀಯ ಕಂಪನಿಗಳಿಗೆ ವಿದೇಶಿ ಬಂಡವಾಳ ಪಡೆಯೋಕೆ ಸಹಾಯವಾಗಲಿದೆ. ಅಲ್ಲದೆ ವಿದೇಶಿ ಹೂಡಿಕೆಗೆ ಬೂಸ್ಟ್‌ ಸಿಗಲಿದೆ. ಅಂದ್ಹಾಗೆ ಕಳೆದ ಜುಲೈನಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, IFSC ಎಕ್ಸ್‌ಚೇಂಜ್‌ಗಳಲ್ಲಿ ಭಾರತೀಯ ಕಂಪನಿಗಳನ್ನ ಲಿಸ್ಟ್‌ ಮಾಡೋಕೆ ಸರ್ಕಾರ ನಿರ್ಧಾರ ಮಾಡಿದೆ ಅಂತೇಳಿದ್ರು. ಸೊ ಇದೀಗ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನ ತಂದು ವಿದೇಶಿ ಮಾರ್ಕೆಟ್‌ನಲ್ಲಿ ಕಂಪನಿಗಳನ್ನ ಲಿಸ್ಟ್‌ ಮಾಡೋಕೆ ಅನುವು ಮಾಡಿಕೊಡಲಾಗಿದೆ.

-masthmagaa.com

Contact Us for Advertisement

Leave a Reply