ನೇವಿ ಸೇರಿತು ʻಅಗೋಚರʼ ಮಿಸೈಲ್‌ ಡೆಸ್ಟ್ರಾಯರ್‌ INS ಇಂಪಾಲ್‌!

masthmagaa.com:

ಮಂಗಳವಾರ ನೂತನ ʻವಿಶಾಕಪಟ್ಟಣಂʼ ದರ್ಜೆಯ ಯುದ್ಧ ನೌಕೆ INS ʻಇಂಪಾಲ್‌ʼನ್ನ ಇಂಡಿಯನ್ನ ನೇವಿಗೆ ನಿಯೋಜನೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಮುಂಬೈನಲ್ಲಿ ನೌಕೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ನೇವಿ ಚೀಫ್‌ ಅಡ್ಮಿರಲ್‌ ಆರ್‌ ಹರಿಕುಮಾರ್‌ ಹಾಜರಿದ್ರು. INS ಇಂಪಾಲ್‌ ಈಶಾನ್ಯ ರಾಜ್ಯಗಳ ನಗರವೊಂದ್ರ ಹೆಸರು ಪಡೆದ ಮೊದಲ ನೌಕೆ ಎನಿಸಿಕೊಂಡಿದೆ. ಇದು ಸ್ಟೆಲ್ತ್‌ ಅಂದ್ರೆ ರೆಡಾರ್‌ ಕಣ್ತಪ್ಪಿಸಿ ಕಾರ್ಯಚರಣೆ ನಡೆಸೋ ಮಿಸೈಲ್‌ ಡೆಸ್ಟ್ರಾಯರ್ ನೌಕೆಯಾಗಿದೆ.‌ ಭಾರತದ ವಾರ್‌ ಶಿಪ್‌ ಡಿಸೈನ್‌ ಬ್ಯೂರೋ ಈ ನೌಕೆಯನ್ನ ಡಿಸೈನ್‌ ಮಾಡಿದ್ದು, ದೇಶೀಯವಾಗಿ ಮುಂಬೈನ ಮಜಗಾಂವ್‌ ಡಾಕ್‌ ಲಿಮಿಟೆಡ್‌ನಲ್ಲಿ ತಯಾರಿಸಲಾಗಿದೆ. ಇನ್ನು ಕಾರ್ಯಕ್ರಮದ ವೇಳೆ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅರಬ್ಬಿ ಸಮುದ್ರದಲ್ಲಿ ಭಾರತೀಯ ಹಡಗುಗಳ ಮೇಲಿನ ದಾಳಿಗಳ ಬಗ್ಗೆ ಮಾತನಾಡಿದ್ದಾರೆ. ಮಂಗಳೂರಿಗೆ ಬರ್ತಿದ್ದ MV Chem Pluto ಹಡಗಿನ ಮೇಲೆ ದಾಳಿ ಮಾಡಿದೋರನ್ನ ಹುಡುಕಿ ಕ್ರಮ ತಗೊಳ್ತೀವಿ. ಕೆಲವು ದೇಶಗಳು ಭಾರತದ ಅಭಿವೃದ್ಧಿ ನೋಡಿ ಮಂಕಾಗಿವೆ. ಅವ್ರೇ ದಾಳಿ ನಡೆಸಿರೋದು. ಅಂತವ್ರು ಸಮುದ್ರದ ಆಳದಲ್ಲಿ ಅಡಗಿದ್ರೂ ಬಿಡಲ್ಲ. ಸರ್ಕಾರ ಈ ವಿಚಾರವನ್ನ ಸೀರಿಯಸ್ಸಾಗಿ ತಗೊಂಡಿದೆ. ಅಂತೇಳಿದ್ದಾರೆ

-masthmagaa.com

Contact Us for Advertisement

Leave a Reply