ನೌಕಾಪಡೆ ರ‍್ಯಾಂಕ್‌ಗಳ ಪರಿಷ್ಕರಣೆ: ಹೊಸ ಎಪಾಲೆಟ್‌ಗಳು ರಿಲೀಸ್‌

masthmagaa.com:

ಇಂಡಿಯನ್‌ ನೇವಿ ತನ್ನ ಅಧಿಕಾರಿಗಳ ದರ್ಜೆಯನ್ನ ಪರಿಷ್ಕರಣೆ ಮಾಡೋಕೆ… ರಿವೈಸ್‌ ಮಾಡೋಕೆ ಹೊರಟಿದೆ. ಇದೇ ವಿಚಾರವಾಗಿ ಮೂರು ದರ್ಜೆಗಳ ನೂತನ ಎಪಾಲೆಟ್‌, ಅಂದ್ರೆ ಭುಜದ ಮೇಲೆ ಧರಿಸೋ ಮುದ್ರೆಗಳನ್ನ ನೇವಿ ರಿಲೀಸ್‌ ಮಾಡಿದೆ. ಡಿಸೆಂಬರ್‌ 4ರಂದು ಪ್ರಧಾನಿ ಮೋದಿ ನೌಕಾದಿನದ ಕಾರ್ಯಕ್ರಮದಲ್ಲಿ ಈ ಬಗ್ಗೆ ಅನೌನ್ಸ್‌ ಮಾಡಿದ್ರು. ಇದೀಗ ಅಡ್ಮಿರಲ್‌, ವೈಸ್‌ ಅಡ್ಮಿರಲ್‌ ಹಾಗೂ ರಿಯರ್‌ ಅಡ್ಮಿರಲ್‌ಗಳು ಧರಿಸೋ ಎಪಾಲೆಟ್‌ಗಳ ಡಿಸೈನನ್ನ ರಿಲೀಸ್‌ ಮಾಡಿದೆ. ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯಿಂದ ಇನ್ಸ್‌ಪೈರ್‌ ಆಗಿ ಈ ಎಪಾಲೆಂಟ್‌ಗಳನ್ನ ಡಿಸೈನ್‌ ಮಾಡಲಾಗಿದೆ. ಈ ಮುದ್ರೆಗಳು ನಮ್ಮ ದೇಶದ ಶ್ರೀಮಂತ ಕಡಲ ಪರಂಪರೆಯನ್ನ.. ಮೆರಿಟೈಮ್‌ ಹೆರಿಟೇಜನ್ನ ಬಿಂಬಿಸುತ್ವೆ ಅಂತ ನೇವಿ ಹೇಳಿದೆ. ಇನ್ನು ಭಾರತೀಯ ಸಂಪ್ರದಾಯವನ್ನು ಹೋಲುವಂತೆ ರ‍್ಯಾಂಕ್‌ಗಳ ಹೆಸರನ್ನ ಪರಿಷ್ಕರಣೆ ಮಾಡಲಾಗತ್ತೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply