ಇಸ್ರೇಲ್‌ನಲ್ಲಿ ಭಾರತ ಮೂಲದ ಯೋಧ ಸಾವು!

masthmagaa.com:

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಇದೀಗ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಇಸ್ರೇಲ್‌ ರಕ್ಷಣಾ ಪಡೆಯ ನಾರ್ದನ್‌ ಕಮಾಂಡ್‌ ಭೇಟಿ ಮಾಡಿದ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಮೇಲೆ ದಾಳಿ ನಡೆಸಿದ್ರೆ ಲೆಬನಾನ್‌ನ ರಾಜಧಾನಿ ಬೈರುತ್‌ ಮತ್ತು ದಕ್ಷಿಣ ಲೆಬನಾನ್‌ನನ್ನ ಗಾಜಾ ಮತ್ತು ಖಾನ್‌ ಯುನೀಸ್‌ ತರ ಮಾಡಿ ಬಿಡ್ತೀವಿ. ಅಲ್ಲಿ ಯಾವ ರೀತಿಯಲ್ಲಿ ದಾಳಿ ಮಾಡಿದ್ದೇವೋ ಅದೇ ರೀತಿ ನಿಮ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿ ನಾಶ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ. ಅಂದ್ಹಾಗೆ ಇಸ್ರೇಲ್‌ ಮತ್ತು ಲೆಬನಾನ್‌ ಬಾರ್ಡರ್‌ನಲ್ಲಿ ಇಸ್ರೇಲ್‌ ರಕ್ಷಣಾ ಪಡೆ ಮತ್ತು ಈ ಉಗ್ರಗಾಮಿ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಿಕಿ ಬೆನ್ನಲ್ಲೇ ಬೆಂಜಮಿನ್‌ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.

ಇನ್ನೊಂದ್ಕಡೆ ಹಮಾಸ್‌ ವಿರುದ್ಧ ಯುದ್ಧದಲ್ಲಿ ಇಸ್ರೇಲಿಗೆ ಬೆಂಬಲ ನೀಡ್ತಿರೊ ಅಮೆರಿಕ ಇದೀಗ ಅದರ ವಿರುದ್ಧ ಕಿಡಿಕಾರಿದೆ. ಹಮಾಸ್‌ ವಿರುದ್ಧ ನಡೆಸ್ತಿರೋ ಇಸ್ರೇಲ್‌ ದಾಳಿಯಲ್ಲಿ ಅಮಾಯಕ ನಾಗರಿಕರು ಬಲಿಯಾಗ್ತಿದ್ದಾರೆ. ಆದ್ರಿಂದ ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯಾದರ್ಶಿ ಆಂಟನಿ ಬ್ಲಿಂಕನ್‌ ಇದೀಗ ಇಸ್ರೇಲ್‌ ವಿರುದ್ಧ ಕಿಡಿಕಾರಿದ್ದಾರೆ. ಪ್ರೆಸ್‌ ಕಾನ್ಫರೆನ್ಸ್‌ ಒಂದ್ರಲ್ಲಿ ಮಾತನಾಡಿದ ಬ್ಲಿಂಕನ್‌, ಇಸ್ರೇಲ್‌ ಹೇಳಿದ್ದೊಂದು ಮಾಡ್ತಿರೋದೊಂದು ಅಂತ ಹೇಳಿದ್ದಾರೆ. ʻನಾಗರಿಕರನ್ನ ರಕ್ಷಿಸೋ ಇಸ್ರೇಲ್‌ನ ಉದ್ದೇಶ ಹಾಗೂ ಪ್ರಸ್ತುತವಾಗಿ ಇಸ್ರೇಲ್‌ನಲ್ಲಿ ನಡಿತೀರೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗಾಜಾದ ನಾಗರಿಕರ ರಕ್ಷಣೆಗೆ ಹೆಚ್ಚಿನ ಒತ್ತು ನೀಡೋದು ಬಹಳ ಇಪಾರ್ಟೆಂಟ್‌ ಆಗಿದೆʼ ಅಂತ ಹೇಳಿದ್ದಾರೆ.
ಇತ್ತ ಗಾಜಾದ ನಾಗರಿಕರನ್ನ ರಕ್ಷಿಸೋ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕೂಡ ಬೆಂಜಮಿನ್‌ ನೆತನ್ಯಾಹುಗೆ ಕಾಲ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗಾಜಾದ ದೊಡ್ಡ ದೊಡ್ಡ ಸಿಟಿಗಳಲ್ಲಿ ಯುದ್ಧ ಬಹಳ ತೀವ್ರ ಸ್ವರೂಪವನ್ನ ಪಡ್ಕೊಳ್ತಿದೆ. ಆದ್ರಿಂದ ಗಾಜಾದ ನಾಗರಿಕರ ರಕ್ಷಣೆ ಮತ್ತವರನ್ನ ಹಮಾಸ್‌ ಉಗ್ರರಿಂದ ಬೇರ್ಪಡಿಸಿ, ಸೇಫ್‌ ಏರಿಯಾಗಳಿಗೆ ಶಿಫ್ಟ್‌ ಮಾಡೋದು ಅಗತ್ಯವಾಗಿದೆ ಅಂತ ಬೈಡನ್‌ ಹೇಳಿರೋದಾಗಿ ಅಮೆರಿಕದ ವೈಟ್‌ ಹೌಸ್‌ ಮಾಹಿತಿ ನೀಡಿದೆ.

ಇದೆಲ್ಲದ್ರ ನಡುವೆ ಇದೀಗ ಇಸ್ರೇಲ್‌-ಹಮಾಸ್‌ ಯುದ್ಧದಲ್ಲಿ ಭಾರತೀಯ ಮೂಲದವ್ರು ಮೃತಪಟ್ಟಿರೋದು ವರದಿಯಾಗಿದೆ. ಭಾರತೀಯ ಮೂಲದ ಇಸ್ರೇಲಿ ಯೋಧ 34 ವರ್ಷದ ಮಾಸ್ಟರ್‌ ಸಾರ್ಜೆಂಟ್‌ (ರೆಸ್‌) ಅಶ್ಡೋಡ್‌ನ ಗಿಲ್‌ ಡೇನಿಯಲ್ಸ್‌ ಹಮಾಸ್‌ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಡಿಸೆಂಬರ್‌ 5 ರಂದು ಹುತಾತ್ಮರಾಗಿದ್ದಾರೆ. ಗಾಜಾಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ ಹತ್ಯೆಯಾದ ಇಬ್ಬರು ಸೈನಿಕರಲ್ಲಿ ಗಿಲ್‌ ಕೂಡ ಒಬ್ರು ಅಂತ ಇಸ್ರೇಲ್‌ ರಕ್ಷಣಾ ಪಡೆಗಳು ಕನ್ಫರ್ಮ್‌ ಮಾಡಿದೆ. ಇವ್ರ ಅಂತ್ಯಕ್ರಿಯೆಯನ್ನ ಡಿಸೆಂಬರ್‌ 6 ರಂದು ಅವ್ರ ಹುಟ್ಟೂರು ಮಹಾರಾಷ್ಟ್ರದ ಮಿಲಿಟರಿ ಸ್ಮಶಾನದಲ್ಲಿ ನಡೆಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply