ಅಮೆರಿಕದಲ್ಲಿ ಮತ್ತೆ ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ!

masthmagaa.com:

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೀತಿರೋ ಹಲ್ಲೆಗಳು ಮುಂದುವರೆದಿವೆ. ಇದೀಗ ಭಾರತೀಯ ವಿದ್ಯಾರ್ಥಿಯೊಬ್ಬ ತನ್ನ ಮುಖದ ಮೇಲೆ ರಕ್ತ ಸುರೀತಿರೋ ಸ್ಥಿತಿಯಲ್ಲಿ ವಿಡಿಯೋ ಮಾಡಿ, ನನಗೆ ಸಹಾಯ ಮಾಡಿ ಅಂತ ಬೇಡ್ಕೊಂಡಿರೋ ವಿಡಿಯೋ ಚಿಕಾಗೋದಲ್ಲಿ ಕಂಡು ಬಂದಿದೆ. ಈತನನ್ನ ಸಯೇದ್‌ ಮಜಾಹಿರ್‌ ಅಲಿ ಅಂತ ಗುರುತಿಸಲಾಗಿದೆ. ಹೌದು, ಈತ ಈ ವಿಡಿಯೋದಲ್ಲಿ ತನ್ನ ಮೇಲೆ ಕಳ್ಳರು ಬಂದು ಅಟ್ಯಾಕ್‌ ಮಾಡಿದ್ದಾರೆ. ಸೋ, ನನಗೆ ಹೆಲ್ಪ್‌ ಮಾಡಿ ಅಂತ ಅಂಗಲಾಚಿ ಕೇಳ್ಕೊಂಡಿದ್ದಾನೆ. ಈ ವಿಡಿಯೋ ನೋಡಿ ಟೆನ್ಶನ್‌ ಮಾಡ್ಕೊಂಡ ಹೈದರಾಬಾದ್‌ನಲ್ಲಿರೋ ಆತನ ಮನೆಯವ್ರು ಭಾರತ ಸರ್ಕಾರದ ಹತ್ರ ಮನವಿ ಮಾಡ್ಕೊಂಡಿದ್ದಾರೆ. ಚಿಕಾಗೋಗೆ…ಆತನ ಬಳಿ ಹೋಗೋಕೆ ಅರೇಂಜ್‌ಮೆಂಟ್‌ ಮಾಡ್ಕೊಡಿ ಅಂತ ಅವ್ರ ಪತ್ನಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ಗೆ ಪತ್ರ ಬರೆದು ಮನವಿ ಮಾಡ್ಕೊಂಡಿದ್ದಾರೆ. ಅಂದ್ಹಾಗೆ ಈತನ ಮೇಲೆ ದಾಳಿ ನಡೆದಿರೋದು ಅಲ್ಲಿನ CCTV ನಲ್ಲೂ ಕ್ಯಾಪ್ಚರ್‌ ಆಗಿದೆ. ನಾಲ್ವರು ಸೇರಿ ಏಕಾಏಕಿ ದಾಳಿ ಮಾಡಿದ ಪರಿಣಾಮ, ಆತನ ಮೂಗು..ಬಾಯಿಲೆಲ್ಲಾ ರಕ್ತ ಸುರೀತಿತ್ತು.

masthmagaa.com

Contact Us for Advertisement

Leave a Reply