ಫಿಲಿಪೈನ್ಸ್‌ನಲ್ಲಿ ಭಾರತದ ಯುದ್ಧನೌಕೆ! ಚೀನಾಗೆ ಟಾಂಗ್‌!

masthmagaa.com:

ಇಂಡಿಯನ್‌ ನೇವಿಯ ಯುದ್ಧನೌಕೆ INS Kadmatt ಫಿಲಿಪ್ಪೈನ್ಸ್‌ ರಾಜಧಾನಿ ಮನಿಲಾ ಬಂದರಿನಲ್ಲಿ ಬೀಡು ಬಿಟ್ಟಿದೆ. ಈ ಮೂಲಕ ಆಗಾಗ ಹಿಂದೂ ಮಹಾ ಸಾಗರದ ಪ್ರದೇಶಕ್ಕೆ ಹಡಗುಗಳನ್ನ ಕಳಿಸಿ ತಂಟೆ ಮಾಡೋ ಚೀನಾಗೆ, ಅದರದ್ದೇ ಸ್ಟೈಲ್‌ನಲ್ಲಿ ಟಾಂಗ್‌ ಕೊಟ್ಟಿದೆ. ಕಳೆದ ವಾರ ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪೈನ್ಸ್‌ ಹಡಗುಗಳ ಮೇಲೆ ಚೀನಾ ಜಲ ಫಿರಂಗಿ ಬಳಸಿ ಪುಂಡಾಟ ಮೆರೆದಿತ್ತು. ಫಿಲಿಪೈನ್ಸ್‌ ಜೊತೆಗೆ ಒಳ್ಳೆಯ ಮಿಲಿಟರಿ ಸಂಬಂಧ ಹೊಂದಿರೊ ಭಾರತ ಈಗ ಅದೇ ದಕ್ಚಿಣ ಚೀನಾ ಸಮುದ್ರಕ್ಕೆ ತನ್ನ ಆ್ಯಂಟಿ ಸಬ್‌ಮರೀನ್ ಯುದ್ಧ ನೌಕೆ ಕಳಿಸಿದೆ. ಈ ಬಗ್ಗೆ ಮಾತನಾಡಿರೋ ಫಿಲಿಪೈನ್ಸ್‌ನಲ್ಲಿರೋ ಭಾರತದ ರಾಯಭಾರಿ ಶಂಭು ಕುಮಾರನ್‌ “ನಮ್ಮ ಫೆಲೋ ಡೆಮೊಕ್ರಸಿ ಫಿಲಿಪೈನ್ಸ್‌ ಜೊತೆಗಿನ ದೃಢವಾದ ದ್ವಿಪಕ್ಷೀಯ ಸಂಬಂಧದ ಬಗ್ಗೆ ನಮಗೆ ಕನ್ಸರ್ನ್‌ ಇದೆ. ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡೋ ಬಗ್ಗೆ ಭಾರದ ನಿಲುವು ಗಟ್ಟಿಯಾಗಿದೆ. ಸಾಗರಗಳ ರೂಲ್ಸನ್ನ ಪಾಲನೆ ಮಾಡೋಕೆ ನಮ್ಮ ಫ್ರೆಂಡ್ ಫಿಲಿಪೈನ್ಸ್‌ ಕಮಿಟ್‌ ಆಗಿದೆ. ನಾವು‌ ಅದರ ಜೊತೆಗಿರ್ತೀವಿ” ಅಂದಿದ್ದಾರೆ. ಇದೇ ವೇಳೆ ಮನಿಲಾದ ಸೆಕಂಡ್‌ ಥಾಮಸ್‌ ಶೋಲ್ಸ್‌ ದ್ವೀಪಗಳ ಬಳಿ INS Kadmatt ಹಾಗೂ ಪಿಲಿಪೈನ್ಸ್‌ ಗಸ್ತು ನೌಕೆಗಳು ಒಟ್ಟಾಗಿ ಮರಿಟೌಮ್‌ ಎಕ್ಸಸೈಸ್‌ನಲ್ಲಿ ಪಾಲ್ಗೊಳ್ಳಲಿವೆ ಅಂತ ಕುಮಾರನ್‌ ಹೇಳಿದ್ದಾರೆ. ಅಂದ್ಹಾಗೆ ಚೀನಾ ಮೇಲೆ ಕಣ್ಣಿಡೋಕೆ ಭಾರತ ಆಸಿಯಾನ್‌ ದೇಶಗಳ ಜೊತೆಗಿನ ಮಿಲಿಟರಿ ಸಂಬಂಧಗಳನ್ನ ಎಕ್ಸ್‌ಪ್ಯಾಂಡ್‌ ಮಾಡ್ತಿದೆ. ಫಿಲಿಪೈನ್ಸ್‌ ಈಗಾಗ್ಲೆ ಭಾರತದ ಬ್ರಮ್ಹೋಸ್‌ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡ್ಕೊಂಡಿದೆ. ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಈ ವರ್ಷ ಜಕಾರ್ತದಲ್ಲಿ ನಡೆದ ಆಸಿಯಾನ್‌ ಪ್ಲಸ್‌ ಮೀಟಿಂಗ್‌ನಲ್ಲೂ ಭಾರತ- =ಆಸಿಯಾನ್‌ ದೇಶಗಳ ಸಂಬಂಧ ಹಾಗೂ ಈ ಭಾಗದ ನೌಕಾಯಾನ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ರು.

-masthmagaa.com

Contact Us for Advertisement

Leave a Reply