ಭಾರತೀಯ ಕುಸ್ತಿ ಒಕ್ಕೂಟವನ್ನ ಸಸ್ಪೆಂಡ್‌ ಮಾಡಿದ್ದೇಕೆ UWW!

masthmagaa.com:

ದೇಶದಲ್ಲಿ WFI ಮುಖ್ಯಸ್ಥನ ವಿರುದ್ಧ ಕುಸ್ತಿಪಟುಗಳ ಹೋರಾಟ ಇನ್ನು ಅಂತ್ಯಗೊಂಡಿಲ್ಲ. ಇದರ ನಡುವೆಯೇ ವಿಶ್ವ ವೇದಿಕೆಯಲ್ಲಿ WFIಗೆ ಮತ್ತೊಂದು ಶಾಕ್‌ ತಗುಲಿದೆ. ದಿ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (UWW) ಸಂಸ್ಥೆ, WFIನ್ನ ಸಸ್ಪೆಂಡ್‌ ಮಾಡಿದೆ. ಸರಿಯಾದ ಟೈಮ್‌ಗೆ ಚುನಾವಣೆ ಮಾಡದೇ ಇರೋದಕ್ಕೆ ಸಸ್ಪೆಂಡ್‌ ಮಾಡಲಾಗಿದೆ ಅಂತ UWW ಕಾರಣ ನೀಡಿದೆ. ಇದ್ರಿಂದ ಇನ್ಮುಂದೆ ನಡೆಯುವ ವರ್ಲ್ಡ್‌ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತೀಯ ಕುಸ್ತಿಪಟುಗಳು, ಭಾರತವನ್ನ ಪ್ರತಿನಿಧಿಸೋಕೆ ಆಗಲ್ಲ. ಅವ್ರು ನ್ಯೂಟ್ರಲ್‌ ಆಗಿ ಸ್ಪರ್ಧಿಸಬೇಕಾಗುತ್ತೆ. ಅಂದ್ಹಾಗೆ WFI ಚುನಾವಣೆ ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ. ಜುಲೈ 11 ರಂದೇ ಚುನಾವಣೆ ನಡೆಯಬೇಕಿತ್ತು. ಆದ್ರೆ ಚುನಾವಣೆಯಲ್ಲಿ ಅಸ್ಸಾಂ ರೆಸ್ಲಿಂಗ್‌ ಅಸೋಸಿಯೇಶನ್‌ನ್ನ ಇನ್‌ಕ್ಲೂಡ್‌ ಮಾಡಿದ್ದಿಲ್ಲ. ಇದನ್ನ ಪ್ರಶ್ನಿಸಿ ಅಸ್ಸಾಂ ರೆಸ್ಲಿಂಗ್‌ ಅಸೋಸಿಯೇಶನ್‌ ಕೋರ್ಟ್‌ ಮೆಟ್ಟಿಲೇರಿದೆ.

-masthmagaa.com

Contact Us for Advertisement

Leave a Reply