4 ಟ್ರಿಲಿಯನ್‌ ಡಾಲರ್‌ ಗಡಿ ದಾಟಿದ ಭಾರತದ ಆರ್ಥಿಕತೆ!

masthmagaa.com:

ನಾಗಾಲೋಟದಲ್ಲಿ ಓಡ್ತಿರೊ ಭಾರತದ ಆರ್ಥಿಕತೆ ಮೊದಲ ಬಾರಿಗೆ 4 ಟ್ರಿಲಿಯನ್‌ ಡಾಲರ್‌ ಅಂದ್ರೆ ಸುಮಾರು 332 ಲಕ್ಷ ಕೋಟಿ ರೂಪಾಯಿಯನ್ನ ದಾಟಿದೆ. ನವೆಂಬರ್‌ 19 ಅಂದ್ರೆ ಇಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಆಧಾರದ ಮೇಲೆ ಎಲ್ಲ ದೇಶಗಳ ಲೈವ್ GDPಯನ್ನ ಸ್ಕ್ರೀನ್‌ ಶಾಟ್‌ ತೆಗೆದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಇದೇ ಮೊದಲ ಬಾರಿಗೆ ಭಾರತದ ಆರ್ಥಿಕತೆ 4 ಟ್ರಿಲಿಯನ್‌ ಡಾಲರ್‌ ಗಡಿ ದಾಟಿ 5 ಟ್ರಿಲಿಯನ್‌ ಡಾಲರ್‌ ಗುರಿಯತ್ತ ವೇಗವಾಗಿ ಸಾಗಿದೆ. ಜಗತ್ತಲ್ಲಿ ಅತಿ ವೇಗವಾಗಿ ಬೆಳೀತಿರೋ ಮೇಜರ್‌ ಆರ್ಥಿಕತೆ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿರೊ ಭಾರತ, 4.3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದಿರೊ ಜರ್ಮನಿ ಹಾಗೂ 4.4 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದಿರೊ ಜಪಾನ್‌ನ್ನ ಓವರ್‌ಟೇಕ್‌ ಮಾಡುವತ್ತ ದಾಪುಗಾಲಾಕಿದೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌, ಕೇಂದ್ರ ಸಚಿವ ಅರ್ಜುನ್‌ ಲಾಲ್‌ ಮೆಘ್ವಾಲ್‌, ಗೌತಮ್‌ ಅದಾನಿ ಸೇರಿದಂತೆ ಹಲವು ಪ್ರಮುಖರು ಭಾರತದ ಈ ಸಾಧನೆಗೆ ಮೋದಿ ಸರ್ಕಾರವನ್ನು ಶ್ಲಾಘನೆ ಮಾಡಿದ್ದಾರೆ. ಅಂದ್ಹಾಗೆ ವಿಶ್ವದ ಪ್ರಮುಖ ಆರ್ಥಿಕ ದೇಶಗಳ ಪೈಕಿ ಭಾರತ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಮುಂದಿನ 2 ವರ್ಷಗಳಲ್ಲಿ ಶೇ.6ಕ್ಕಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ ಅಂತ RBI ಹೇಳಿದೆ. RBI ಮಾತ್ರವಲ್ಲ ವಿಶ್ವದ ಇತರ ಪ್ರಮುಖ ಆರ್ಥಿಕ ಸಂಸ್ಥೆಗಳು ಇದೇ ರೀತಿ ಅಂದಾಜು ಮಾಡಿವೆ. 2027ರಷ್ಟರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವಗಾಇ ಹೊರಹೊಮ್ಮಲಿದೆ ಅಂತ ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ. ಇನ್ನು ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರೊ ದೇಶವಾಗಿದ್ರೆ, ಪಕ್ಕದ ಚೀನಾ ಎರಡನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply