ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಪಂಜಾಬ್ ಮೂಲದ ಹರ್ನಾಜ್ ಸಂಧು!

masthmagaa.com:

ಭಾರತದ ರೂಪದರ್ಶಿ ಹಾಗೂ ನಟಿ ಪಂಜಾಬ್ ಮೂಲದವರಾದ ಹರ್ನಾಜ್ ಸಂಧು ಕೇವಲ 21ನೇ ವಯಸ್ಸಿಗೆ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗುವ ಮೂಲಕ ಭಾರತದ ಮೂರನೇ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. ಇಡೀ ವಿಶ್ವದ ಗಮನ ಸೆಳೆದಿರುವ ಹರ್ನಾಝ್ ಸಂಧು 2021ರ ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. 21 ವರ್ಷದ ಹರ್ನಾಜ್, ಪ್ರಸ್ತುತ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

2017ರಲ್ಲಿ ನಡೆದ ಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸುವುದರೊಂದಿಗೆ ಹರ್ನಾಜ್ ತಮ್ಮ ಪ್ರಯಾಣವನ್ನ ಆರಂಭಿಸಿದ್ದರು. ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಸೇರಿದಂತೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಹರ್ನಾಜ್ ಫೆಮಿನ ಮಿಸ್ ಇಂಡಿಯಾ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೇ ಕೆಲವು ಪಂಜಾಬಿ ಸಿನಿಮಾಗಳಲ್ಲೂ ಕೂಡ ನಟಿಯಾಗಿ ಹರ್ನಾಜ್ ಸಂಧು ಅವರು ಅಭಿನಯಿಸಿದ್ದಾರೆ.

ಇಸ್ರೇಲ್ ನ ದಕ್ಷಿಣ ಈಲಿಯಟ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದ ಭಾರತದ ಹರ್ನಾಜ್ ಸಂಧು, ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ 2021ರ ಮಿಸ್ ಯೂನಿವರ್ಸ್ ಈಗ ಕಿರೀಟವನ್ನ ತಮ್ಮದಾಗಿಸಿ ಕೊಂಡಿದ್ದಾರೆ. 2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಕೌರ್ ಅವರಿಗೆ ಕಿರೀಟ ತೊಡಿಸಿ ಸಂಭ್ರಮಿಸಿದ್ರು. ಮಿಸ್ ಯೂನಿವರ್ಸ್ ಸ್ಥಾನ ಭಾರತದ ಪಾಲಾದ್ರೆ ಪೆರುಗ್ವೆಯ ನಾಡಿಯ ಫೆರೇರಾ ಮೊದಲ ರನ್ನರ್ ಆಪ್ ಆದ್ರೆ, ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಸೆಕೆಂಡ್ ರನ್ನರ್ ಆಪ್ ಆಗಿ ಹೊರ ಹೊಮ್ಮಿದರು.


 

ಇದಕ್ಕೂ ಮೊದಲು ಹರ್ನಾಜ್ ಸಂಧು ಅವರಿಗೆ ಸ್ಪರ್ಧೆಯಲ್ಲಿ ಮೊದಲ ಮೂರು ಸುತ್ತಿನ ಭಾಗವಾಗಿ ಇಂದು ಯುವತಿಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ಎದುರಿಸಬೇಕು? ಹಾಗೂ ನಿಮ್ಮ ಸಲಹೆಗಳೇನು ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಹರ್ನಾಜ್​ ಸಂಧು ಇಂದಿನ ಯುವ ಜನತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಆತ್ಮವಿಶ್ವಾಸ ಮತ್ತು ಅವರ ಮೇಲೆ ಇರುವ ನಂಬಿಕೆಯ ಕೊರತೆ. ಇತರರು ಏನೆಂದುಕೊಳ್ಳುತ್ತಾರೊ ಎನ್ನುವ ದುಗುಢ ಭಾವದಿಂದಲೇ ಇಂದಿನ ಯುವಜನತೆ ತಾವು ಮಾಡುವ ಕೆಲಸದಿಂದ ವಿಮುಖರಾಗುತ್ತಿದ್ದಾರೆ ಎಂದು ಉತ್ತರ ನೀಡಿದ್ದರು.

ಜತಗೆ ಸಲಹೆಯಾಗಿ ಅದರ ಬದಲು ಬೇರೆಯವರೊಂದಿಗೆ ಹೊಂದಾಣಿಕೆ ಮಾಡುವುದನ್ನು ನಿಲ್ಲಿಸಿ, ನಿಮಗೇ ನಿಮ್ಮದೇ ಅದ ಜೀವನವಿದೆ, ಕನಸಿದೆ. ಅದರೆಡೆಗೆ ಗಮನ ನೀಡಿ. ಪ್ರಪಂಚದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಅದನ್ನು ಚರ್ಚಿಸಿ. ನಿಮ್ಮ ಕನಸಿಗೆ ನೀವೇ ಧ್ವನಿಯಾಗಬೇಕು.  ನನ್ನನ್ನು ನಾನು ಹೆಚ್ಚು ನಂಬುತ್ತೇನೆ ಅದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದು ಸಲಹೆ ನೀಡುವ ಮೂಲಕ ತೀರಪುಗಾರರ ಪ್ರಶ್ನೆಗೆ ಹರ್ನಾಜ್​ ಸಂಧು ಉತ್ತರಿಸಿದ್ದರು.

-masthmagaa.com

 

Contact Us for Advertisement

Leave a Reply