ಮುಂಬೈ: ದೇಶದ ಅತೀ ಉದ್ದದ ಸೀ ಬ್ರಿಡ್ಜ್‌ ‘ಅಟಲ್‌ ಸೇತು’ ರೆಡಿ!

masthmagaa.com:

ದೇಶದ ಅತೀ ಉದ್ದದ ಸೀ ಬ್ರಿಡ್ಜ್‌ ʻಮುಂಬೈ ಟ್ರಾನ್ಸ್‌ ಹಾರ್ಬರ್ ಲಿಂಕ್‌ʼ (MTHL) ಅಥ್ವಾ ʻಅಟಲ್‌ ಸೇತುʼವನ್ನ ಜನವರಿ 12 ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಬರೋಬ್ಬರಿ 21.8 ಕಿ.ಮೀ ಉದ್ದವಿದ್ದು, ಸೌತ್‌ ಮುಂಬೈನ ಸೇವ್ರಿಯಿಂದ ನವೀ ಮುಂಬೈನ ನ್ಹವಾ ಶೇವಾ ನಗರಗಳನ್ನ ಕನೆಕ್ಟ್‌ ಮಾಡುತ್ತೆ. ಈ ಸೇತುವೆಯಿಂದ ಇವೆರಡು ನಗರಗಳ ಮಧ್ಯೆ ಪ್ರಯಾಣದ ಸಮಯ 2 ಗಂಟೆಯಿಂದ ಜಸ್ಟ್‌ 15-20 ನಿಮಿಷಗಳಿಗೆ ಇಳಿಸಲಿದೆ. ಇದು 6 ಲೇನ್‌ಗಳ ಸೀ ಲಿಂಕ್‌ ಆಗಿದ್ದು, ಈ ಬ್ರಿಡ್ಜ್‌ನ 16.5 ಕಿ.ಮೀ.ನಷ್ಟು ಭಾಗ ಸಮುದ್ರದ ಮೇಲೆ ನಿರ್ಮಾಣವಾಗಿದ್ರೆ ಮತ್ತುಳಿದ 5.5 ಕಿ.ಮೀ.ನಷ್ಟು ಭಾಗ ಭೂಮಿ ಮೇಲಿದೆ. ಇನ್ನು ಸೀ ಬ್ರಿಡ್ಜ್‌ ಮೇಲೆ ಮೋಟರ್‌ಬೈಕ್ಸ್‌, ಆಟೋ ಮತ್ತು ಟ್ರ್ಯಾಕ್ಟರ್‌ಗಳ ಓಡಾಟಕ್ಕೆ ಅವಕಾಶವಿಲ್ಲ. ಮತ್ತುಳಿದ ವಾಹನಗಳಿಗೆ ಪ್ರತೀ ಗಂಟೆಗೆ 100 ಕಿಲೋಮೀಟರ್‌ ಸ್ಫೀಡ್‌ನಲ್ಲಿ ಓಡಿಸ್ಬೋದಾಗಿದೆ. ಜೊತೆಗೆ ಇದ್ರಲ್ಲಿ ಸಾಗೋ ಕಾರ್‌ಗಳಿಗೆ ಒನ್‌ ವೇ ಟೋಲ್‌ ದರವನ್ನ 250 ರೂಪಾಯಿಗೆ ನಿಗಧಿಪಡಿಸಲಾಗಿದೆ. ಇನ್ನು ಈ ಬ್ರಿಡ್ಜ್‌ ನಿರ್ಮಾಣಕ್ಕೆ 21,200 ಕೋಟಿ ರೂಪಾಯಿ ಖರ್ಚಾಗಿದೆ. ಈ ಪೈಕಿ 15,000 ಕೋಟಿ ರೂಪಾಯಿ ಲೋನ್‌ ಪಡೆದಿದ್ದೇವೆ ಅಂತ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply