ಮತ್ತೊಮ್ಮೆ ಅಂಬಾನಿ ಓವರ್‌ಟೇಕ್‌ ಮಾಡಿದ ಅದಾನಿ!

masthmagaa.com:

ಹೊಸ ವರ್ಷದಲ್ಲಿ ಅದಾನಿ ಸಮೂಹದ ಚೇರ್‌ಪರ್ಸನ್‌ ಗೌತಮ್‌ ಅದಾನಿಗೆ ಹೊಸ ಗುಡ್‌ ನ್ಯೂಸ್‌ಗಳು ಒಂದಾದ್ಮೇಲೊಂದು ಬರ್ತಿವೆ. ಮೊದ್ಲು ಹಿಂಡನ್‌ಬರ್ಗ್‌ ಕೇಸ್‌ ವಿಚಾರಣೆ ವಿಷಯವಾಗಿ ಸುಪ್ರೀಂ ಕೋರ್ಟ್‌ ಸೆಬಿ ತನಿಖೆಯಲ್ಲಿ ತಲೆ ಹಾಕಲ್ಲ ಅಂತ ಹೇಳ್ತು. ಇದ್ರ ಬೆನ್ನಲ್ಲೇ ಅದಾನಿ ಷೇರುಗಳು ಗೂಳಿ ಓಟ ನಡೆಸಿದ್ವು. ಇದೀಗ ಮತ್ತೊಮ್ಮೆ ಅದಾನಿ ಶ್ರೀಮಂತಿಕೆ ಲೆಕ್ಕದಲ್ಲಿ ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವ್ರನ್ನ ಹಿಂದಿಕ್ಕಿದ್ದಾರೆ. ಅಮೆರಿಕ ಮೂಲದ ಬ್ಲೂಮ್‌ಬರ್ಗ್‌ ಸಂಸ್ಥೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಲಿಸ್ಟ್‌ ರಿಲೀಸ್‌ ಮಾಡಿದೆ. ಇದ್ರಲ್ಲಿ ಗೌತಮ್ ಅದಾನಿ ಭಾರತದ ಹಾಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಅಂತ ತಿಳಿಸಲಾಗಿದೆ. 97.6 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 8.10 ಲಕ್ಷ ಕೋಟಿ ನೆಟ್‌ ವರ್ಥ್‌ ಜೊತೆ, ಅದಾನಿ ವಿಶ್ವದ 12ನೇ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಇನ್ನು ಮುಖೇಶ್‌ ಅಂಬಾನಿ 97 ಬಿಲಿಯನ್‌ ಡಾಲರ್‌ ಆಸ್ತಿ ಜೊತೆ 13ನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply