ಹಾರ್ದಿಕ್‌ ಪಾಂಡ್ಯರನ್ನ ರಿಪ್ಲೇಸ್‌ ಮಾಡೊದು ತುಂಬಾ ಕಷ್ಟ: ಅಜಿತ್!

masthmagaa.com:

ಮುಂಬರೋ ಟಿ-20 ವಿಶ್ವಕಪ್‌ಗೆ ಭಾರತ ಕ್ರಿಕೆಟ್‌ ತಂಡ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಿಸಿಸಿಐ ಪ್ರೆಸ್‌ಮೀಟ್‌ ಒಂದನ್ನ ಮಾಡಿದೆ. ಪ್ರಮುಖವಾಗಿ ಭಾರತ ಕ್ರಿಕೆಟ್‌ ತಂಡದ ಆಯ್ಕೆಗಾರರ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್‌ಕರ್‌ ಹಾಗೂ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಸೇರಿ ಪ್ರೆಸ್‌ಮೀಟ್‌ ಮಾಡಿದ್ದಾರೆ. ಈ ವೇಳೆ ವಿಶ್ವಕಪ್‌ನಲ್ಲೂ ಐಪಿಎಲ್‌ನಂತೆ 220-230 ರನ್‌ಗಳ ಸ್ಕೋರ್‌ ಸಾಮಾನ್ಯವಾದ್ರೆ ಅಂತಹ ಶಕ್ತಿ ನಮ್ಮ ಸ್ಕ್ವಾಡ್‌ನಲ್ಲಿದೆ ಅಂತ ಅಗರ್‌ಕರ್‌ ಹೇಳಿದ್ದಾರೆ. ಇನ್ನು ಹಾರ್ದಿಕ್‌ ಪಾಂಡ್ಯಗೆ ಉಪನಾಯಕತ್ವ ಪಟ್ಟ ಸಿಕ್ಕಿದ್ದಕ್ಕೆ ಕ್ರಿಕೆಟ್‌ ವಲಯದಲ್ಲಿ ಒಂದಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅಜಿತ್‌, ಹಾರ್ದಿಕ್‌ ಪಾಂಡ್ಯ ಲಾಂಗ್‌ ಬ್ರೇಕ್‌ ನಂತ್ರ ಟೀಮ್‌ಗೆ ಕಮ್‌ಬ್ಯಾಕ್‌ ಮಾಡ್ತಿದ್ದಾರೆ. ಅವ್ರು ಫಿಟ್‌ ಆಗಿದ್ದು, ಅವ್ರನ್ನ ರಿಪ್ಲೇಸ್‌ ಮಾಡೋದು ತುಂಬಾ ಟಫ್‌ ಅಂತೇಳಿದ್ದಾರೆ. ತಂಡದಲ್ಲಿ 4 ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದಕ್ಕೆ ಅಮೆರಿಕದಲ್ಲಿ ಮೊದಲ ಪ್ರೆಸ್‌ಮೀಟ್‌ ಮಾಡಿದ ನಂತ್ರ ಉತ್ತರ ನೀಡ್ತೆನೆ ಅಂತ ರೋಹಿತ್‌ ಹೇಳಿದ್ದಾರೆ. ಅಲ್ದೇ ರಿಂಕು ಸಿಂಗ್‌ರನ್ನ ಮೊದಲ 15 ಸದಸ್ಯರ ತಂಡದಿಂದ ಹೊರಗಿಟ್ಟಿರೊದು ತುಂಬಾ ಕಠಿಣ ನಿರ್ಧಾರವಾಗಿತ್ತು ಅಂತ ರೋಹಿತ್ ಹೇಳಿದ್ದಾರೆ. ಹೀಗಾಗಿ ರಿಂಕು ಸದ್ಯ ಮೀಸಲು ಆಟಗಾರರ ಲಿಸ್ಟ್‌ನಲ್ಲಿ ಇದ್ದಾರೆ.

-masthmagaa.com

Contact Us for Advertisement

Leave a Reply