500 ವಿಮಾನಗಳ ಖರೀದಿಗೆ ಆರ್ಡರ್‌ ಮಾಡಿದ ಇಂಡಿಗೋ ಏರ್‌ಲೈನ್ಸ್‌!

masthmagaa.com:

ಏರ್‌ ಇಂಡಿಯಾ ಐತಿಹಾಸಿಕ ವಿಮಾನ ಖರೀದಿ ಮಾಡಿದ ಬೆನ್ನಲ್ಲೇ ಇಂಡಿಗೋ ಏರ್‌ಲೈನ್ಸ್‌ ಕೂಡ 500 ವಿಮಾನಗಳನ್ನ ಖರೀದಿ ಮಾಡೋಕೆ ಮುಂದಾಗಿದೆ. ಇಂಡಿಗೋ ತನ್ನ ವ್ಯಾಪ್ತಿಯನ್ನ ವಿಸ್ತರಿಸೋ ಸಲುವಾಗಿ ಟರ್ಕಿಶ್‌ ಏರ್‌ಲೈನ್ಸ್‌ ಸಹಭಾಗಿತ್ವದಲ್ಲಿ ಅಂದ್ರೆ ಅವರ ಜೊತೆಗೆ ಸೇರ್ಕೊಂಡು 500 ವಿಮಾನಗಳನ್ನ ಆರ್ಡರ್‌ ಮಾಡಿದೆ. ಇನ್ನು ಇಂಡಿಗೋ ಕೂಡ ಫ್ರಾನ್ಸ್‌ನ ಏರ್‌ಬಸ್‌ನಿಂದ ವಿಮಾನಗಳನ್ನ ಆರ್ಡರ್‌ ಮಾಡಿದ್ದು, 2030ರವರೆಗೆ ಪೂರೈಸಲಾಗುತ್ತೆ ಅಂತ ಏರ್‌ಲೈನ್ಸ್ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಪ್ರಸ್ತುತ ಇಂಡಿಗೋ ಏರ್‌ಲೈನ್ಸ್‌ ಬಳಿ 300 ವಿಮಾನಗಳಿವೆ.

-masthmagaa.com

Contact Us for Advertisement

Leave a Reply