ಇಂಡಿಗೋ ಹಾಗೂ ಬ್ರಿಟಿಷ್‌ ಏರ್‌ಲೈನ್‌ ವರ್ಜಿನ್‌ ಅಟ್ಲಾಂಟಿಕ್‌ ನಡುವೆ ಕೋಡ್‌ಶೇರ್‌ ಒಪ್ಪಂದ!

masthmagaa.com:

ದೇಶದ ಅತಿದೊಡ್ಡ ಏರ್‌ಲೈನ್‌ ಆಗಿರೊ ಇಂಡಿಗೋ ಹಾಗೂ ಬ್ರಿಟಿಷ್‌ ಏರ್‌ಲೈನ್‌ ವರ್ಜಿನ್‌ ಅಟ್ಲಾಂಟಿಕ್‌ ನಡುವೆ ಆದ ಕೋಡ್‌ಶೇರ್‌ ಒಪ್ಪಂದವನ್ನ ಪ್ರಕಟಿಸಿವೆ. ಇಂಡಿಗೋ ವಿಮಾನಗಳಿಗೆ ಕನೆಕ್ಟ್‌ಆಗೊ ಪ್ರಯಾಣಿಕರಿಗೆ, ವರ್ಜಿನ್‌ ಅಟ್ಲಾಂಟಿಕ್‌ ಟಿಕೆಟ್‌ನ್ನ ಮಾರೋಕೆ ಈ ಒಪ್ಪಂದ ಅನುಮತಿ ನೀಡುತ್ತೆ. ಆರಂಭಿಕ ಕೋಡ್‌ಶೇರ್‌ ಸ್ಥಳಗಳಲ್ಲಿ ಭಾರತದ ಚೆನ್ನೈ, ಬೆಂಗಳೂರು, ಹೈದರಾಬಾದ್‌, ಕೊಲ್ಕತ್ತಾ, ಅಹಮದಾಬಾದ್‌, ಅಮೃತಸರ್‌, ಗೋವಾ, ದಿಲ್ಲಿ ಹಾಗೂ ಮುಂಬೈ ಸೇರಿವೆ. ಕೋಡ್‌ಶೇರ್ ಒಪ್ಪಂದದ ಅಡಿಯಲ್ಲಿ, ವರ್ಜಿನ್ ಅಟ್ಲಾಂಟಿಕ್ ಟಿಕೆಟ್ ಅನ್ನು ಹೊಂದಿರೊ ಗ್ರಾಹಕರು ಏರ್‌ಲೈನ್‌ನ ಲಂಡನ್ ಹೀಥ್ರೂ ಏರ್‌ಪೋರ್ಟ್‌ ಮೂಲಕ ದಿಲ್ಲಿ ಮತ್ತು ಮುಂಬೈ ವಿಮಾನಗಳಲ್ಲಿ ಪ್ರಯಾಣಿಸೋಕೆ ಅನುಮತಿ ನೀಡಲಾಗುತ್ತೆ.

-masthmagaa.com

Contact Us for Advertisement

Leave a Reply