ಇಂಡೋನೇಷ್ಯಾ ಅಧ್ಯಕ್ಷರಾಗಿ ಪ್ರಬೋವೊ ಸುಬಿಯಾಂಟೊ ಆಯ್ಕೆ!

masthmagaa.com:

ವಿಶ್ವದ 3ನೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಇಂಡೋನೇಷ್ಯಾದ ಅಧ್ಯಕ್ಷರಾಗಿ ಪ್ರಬೋವೊ ಸುಬಿಯಾಂಟೊ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ನಡೆದ ಚುನಾವಣೆಯ ಮತ ಎಣಿಕೆ ಈಗ ಮುಕ್ತಾಯಗೊಂಡಿದೆ. ಹೀಗಾಗಿ ಇಂಡೋನೇಷ್ಯಾ ಅಧ್ಯಕ್ಷರಾಗಿ ಸುಬಿಯಾಂಟೊ ಹಾಗೂ ಉಪಾಧ್ಯಕ್ಷರಾಗಿ ಗಿಬ್ರಾನ್‌ ರಾಕ್‌ಬುಮಿಂಗ್‌ ರಾಕಾ ಆಯ್ಕೆಯಾಗಿದ್ದಾರೆ. ಇನ್ನು ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತೇಳಿ ಸುಬಿಯಾಂಟೋ ಅವ್ರ ಇಬ್ಬರು ಪ್ರತಿಸ್ಪರ್ಧಿಗಳು ಇಂಡೋನೇಷ್ಯಾ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ ಅತ್ತ ಚುನಾವಣಾ ಆಯೋಗ ಮಾತ್ರ ಸುಬಿಯಾಂಟೊ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಅಂತ ಸ್ಪಷ್ಟ ಪಡಿಸಿದೆ.

-masthmagaa.com

Contact Us for Advertisement

Leave a Reply