ಜಾಗತಿಕವಾಗಿ ಕಾಡ್ತಿದೆ ಬಂಜೆತನದ ಸಮಸ್ಯೆ! WHO ವರದಿಯಲ್ಲೇನಿದೆ?

masthmagaa.com:

ಬಂಜೆತನ ಅಥ್ವಾ Infertility ಅನ್ನೋದು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಕಾಡ್ತಿರುವ ಒಂದು ಸಮಸ್ಯೆಯಾಗಿದೆ. ಇದೀಗ ಜಾಗತಿಕವಾಗಿ 6 ಜನ್ರಲ್ಲಿ ಒಬ್ಬರು ಬಂಜೆತನ ಅಥ್ವಾ ಮಕ್ಕಳನ್ನ ಪಡೆಯೋಕೆ ಸಾಧ್ಯವಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ WHO ರಿಲೀಸ್‌ ಮಾಡಿರುವ ನೂತನ ವರದಿಯಿಂದ ತಿಳಿದು ಬಂದಿದೆ. ವಯಸ್ಕ ಜನಸಂಖ್ಯೆಯಲ್ಲಿ ಸುಮಾರು 17.5% ನಷ್ಟು ಜನರು ಬಂಜೆತನ ಸಮಸ್ಯೆಯನ್ನ ಫೇಸ್‌ ಮಾಡುತ್ತಿದ್ದಾರೆ ಅಂತ WHO ಹೇಳಿದೆ. ಇನ್ನು ಈ ವರದಿಯಿಂದ ತಿಳಿದು ಬಂದ ಇನ್ನೊಂದು ಸತ್ಯ ಏನಂದ್ರೆ ಈ ಬಂಜೆತನ ಗಂಡು -ಹೆಣ್ಣು ಅನ್ನೋ ತಾರತಮ್ಯ ಮಾಡಲ್ಲ ಅಂದ್ರೆ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಈ ಸಮಸ್ಯೆ ಹೆಚ್ಚಾಗಿದೆ ಅಂತ WHOನ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply