ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರದಿಂದ ಸಮಿತಿ ರಚನೆ?

masthmagaa.com:

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ UCC ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. UCC ಸಂಬಂಧ ನಾಲ್ಕು ಸಚಿವರನ್ನೊಳಗೊಂಡ ಇನ್‌ಫಾರ್ಮಲ್‌ ಅಥವಾ ಅನೌಪಚಾರಿಕ ಸಮಿತಿಯೊಂದನ್ನ ರಚಿಸಿದೆ. ಈ ನಾಲ್ಕು ಜನ ಸಚಿವರುಗಳ ನೇತೃತ್ವವನ್ನ ಅರ್ಥ್‌ ‌& ಸೈನ್ಸ್‌ ಮಿನಿಸ್ಟರ್‌ ಕಿರಣ್‌ ರಿಜಿಜು ಅವ್ರು ವಹಿಸಿಕೊಂಡಿದ್ದು, ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಇಶ್ಯೂಸ್‌ ಬಗ್ಗೆ ನೋಡಿಕೊಳ್ಳಲಿದ್ದಾರೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿಯವರು ಮಹಿಳಾ ಹಕ್ಕುಗಳ ರಿಲೇಟೆಡ್‌ ವಿಚಾರಗಳನ್ನ ಹ್ಯಾಂಡಲ್‌ ಮಾಡಲಿದ್ದಾರೆ. ಟೂರಿಸಂ ಸಚಿವ ಜಿ. ಕಿಶನ್‌ ರೆಡ್ಡಿಯವರು ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಇರೋ ಸಮಸ್ಯೆಗಳನ್ನ ನೋಡಿಕೊಳ್ಳಲಿದ್ದಾರೆ. ಲಾ ಸಚಿವ ಅರ್ಜುನ್‌ ರಾಮ್‌ ಮೇಘವಾಕ್‌ ಅವ್ರು UCC ಜಾರಿಗೆ ಬೇಕಾದ ಕಾನೂನು ಅಂಶಗಳನ್ನ ಪರಿಶೀಲನೆ ನಡೆಸಲಿದ್ದಾರೆ. ಸಚಿವರ ಈ ಗುಂಪು ಶೀಘ್ರದಲ್ಲೇ ಪ್ರಧಾನಿ ಮೋದಿಯವರಿಗೆ ತಮ್ಮ ರಿಪೋರ್ಟ್‌ ನೀಡಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply