2024ರ ಲೋಕ ಕಹಳೆಗೂ ಮುನ್ನ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ!

masthmagaa.com:

2024ರ ಲೋಕಸಭೆ ಎಲೆಕ್ಷನ್‌ಗೂ ಮುನ್ನ ಕೇಂದ್ರ ಸರ್ಕಾರದ ಅಂತಿಮ, ಮಧ್ಯಂತರ ಬಜೆಟ್‌ನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಈ ಬಜೆಟ್‌ಗೆ ಪ್ರತಿಕ್ರಿಯಿಸಿರೋ ಪ್ರಧಾನಿ ಮೋದಿ, ಇದು 2024-25ರ ಐತಿಹಾಸಿಕ ಬಜೆಟ್‌ ಅಂದಿದ್ದಾರೆ. ಅಲ್ದೇ ಈ ಬಜೆಟ್ 2047ರ ವೀಕ್ಷಿತ ಭಾರತದ ಶಕ್ತಿಯ ಗ್ಯಾರಂಟಿಯಾಗಿದೆ. ಇದು ಬಡವರು ‍& ಮಧ್ಯಮ ವರ್ಗದವ್ರ ಸಬಲೀಕರಣಕ್ಕಾಗಿ & ಅವ್ರಿಗೆ ಹೆಚ್ಚಿನ ಉದ್ಯೋಗಗಳನ್ನ ಕಲ್ಪಿಸಲಿದೆ. ಈ ಬಜೆಟ್ ದೇಶದ ಆತ್ಮವಿಶ್ವಾಸವನ್ನ ವೃದ್ದಿಸಲಿದೆ ಅಂತ ಪಿಎಂ ಮೋದಿ ಹೇಳಿದ್ದಾರೆ. ಇನ್ನೊಂದೆಡೆ ಈ ಬಜೆಟ್‌ಗೆ ವಿರೋಧ ಪಕ್ಷಗಳು ಅಸಮಾಧಾನ ಹೊರಹಾಕಿವೆ. ಕಾಂಗ್ರೆಸ್ ನಾಯಕ ಮನೀಷ್‌ ತಿವಾರಿ, “18 ಲಕ್ಷ ಕೋಟಿಗೂ ಹೆಚ್ಚು ಫಿಸ್ಕಲ್‌ ಡೆಫಿಸಿಟ್‌ ಅಥ್ವಾ ವಿತ್ತೀಯ ಕೊರತೆ ಇರೋದು ಅತ್ಯಂತ ಚಿಂತಾಜನಕ” ಅಂದಿದ್ದಾರೆ. ಇನ್ನು ‌SP ಮುಖ್ಯಸ್ಥ ಅಖಿಲೇಶ್‌ ಯಾದವ್‌, ಇದೊಂದು ನಿಶ್ಪ್ರಯೋಜಕ ಬಜೆಟ್‌ ಅಂದಿದ್ದಾರೆ. ಅಲ್ಲದೆ ʻಈ ಬಜೆಟ್‌ ಮೋದಿ ಸರ್ಕಾರದ ಕೊನೆಯ ಬಜೆಟ್‌ ಆಗಿದೆ. ಹೀಗಾಗಿ ಇದನ್ನ ಅತ್ಯಂತ ಭಾರ ಹೃದಯದಿಂದ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಧನ್ಯವಾದ ಹೇಳ್ತೇನೆʼ ಅಂತ ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ ಠಾಕ್ರೆ ಬಿಜೆಪಿ ಕಾಲೆಳೆದಿದ್ದಾರೆ.

-masthmagaa.com

Contact Us for Advertisement

Leave a Reply