ಬೆಂಗಳೂರಲ್ಲಿ ಸೈಟ್‌ ಖರೀದಿಸಿದ ಪ್ರಮುಖ ಆ್ಯಪಲ್‌ ಪೂರೈಕೆದಾರ ಕಂಪನಿ ಫಾಕ್ಸ್‌ಕಾನ್‌!

masthmagaa.com:

ಈ ಕಡೆ ತೈವಾನ್‌ ಮೂಲದ ಪ್ರಮುಖ ಎಲೆಕ್ಟ್ರಾನಿಕ್ಸ್‌ ದೈತ್ಯ ಫಾಕ್ಸ್‌ಕಾನ್ ಕಂಪನಿ ಬೆಂಗಳೂರಿನ ಹೊರವಲಯದಲ್ಲಿ ವಿಸ್ತಾರವಾದ ಜಾಗವನ್ನ ಖರೀದಿಸಿರುವುದಾಗಿ ತಿಳಿಸಿದೆ. ಜೊತೆಗೆ ಚೀನಾ ಹೊರತಾಗಿ ಬೇರೆ ಕಡೆಯಲ್ಲೂ ಆ್ಯಪಲ್‌ ಉತ್ಪಾದನೆಯನ್ನ ಹೆಚ್ಚಿಸಲಾಗ್ತಿದೆ ಅಂತ ಕಂಪನಿ ಹೇಳಿದೆ. ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ದೇವನಹಳ್ಳಿಯಲ್ಲಿ 303 ಕೋಟಿ ರೂಪಾಯಿಗೆ 1.3 ಕೋಟಿ ಚದರ ಅಡಿ ಜಾಗವನ್ನ ಖರೀದಿ ಮಾಡಿರೋದಾಗಿ ಕಂಪನಿ ಮಾಹಿತಿ ನೀಡಿದೆ. ಅಂದ್ಹಾಗೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾರ್ಚ್‌ನಲ್ಲಿ ಮಾಹಿತಿ ನೀಡಿದ್ದರು. ಶೀಘ್ರದಲ್ಲೇ ರಾಜ್ಯದಲ್ಲಿ ಐಫೋನ್‌ಗಳನ್ನು ತಯಾರಿಸಲಿದ್ದು, ಇದು ಸುಮಾರು 1 ಲಕ್ಷ ಉದ್ಯೋಗಗಳನ್ನ ಸೃಷ್ಟಿಸುತ್ತದೆ ಅಂತ ಹೇಳಿದ್ರು. ಅಲ್ಲದೆ, ಕರ್ನಾಟಕದಲ್ಲಿ 700 ಮಿಲಿಯನ್ ಡಾಲರ್‌ ಹೂಡಿಕೆ ಮಾಡಲು ಫಾಕ್ಸ್‌ಕಾನ್ ಯೋಜಿಸುತ್ತಿದೆ ಅಂತ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply