ಭಾರತದಲ್ಲಿ ಐ-ಫೋನ್‌ ತಯಾರಿಗೆ ಬೂಸ್ಟ್!‌ ಬರಲಿದೆ ಭಾರಿ ಹೂಡಿಕೆ!

masthmagaa.com:

ಐ-ಫೋನ್‌ ತಯಾರಿಕ ಕಂಪನಿ ತೈವಾನ್‌ ಮೂಲದ Foxconn ಭಾರತದಲ್ಲಿ ತನ್ನ ಮಾರುಕಟ್ಟೆಯನ್ನ ವಿಸ್ತರಿಸೋಕೆ ಪ್ಲಾನ್‌ ಮಾಡಿದೆ. ಬರೋಬ್ಬರಿ 1.6 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 13.2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡೋಕೆ ಮುಂದಾಗಿದೆ. ಹೊಸದೊಂದು ಮೊಬೈಲ್‌ ತಯಾರಿಕ ಘಟಕವನ್ನ ನಿರ್ಮಿಸೋಕೆ ಈ ಇನ್ವೆಸ್ಟ್‌ಮೆಂಟ್‌ ಬಳಸಲಾಗತ್ತೆ ಅಂತ ತಿಳಿದು ಬಂದಿದೆ. ಆದ್ರೆ ಎಲ್ಲಿ ಅಂತ ಕಂಪನಿ ಮಾಹಿತಿ ನೀಡಿಲ್ಲ. ಅಂದ್ಹಾಗೆ Foxconn ಸೇರಿದಂತೆ ಹಲವು ತೈವಾನೀಸ್‌ ಎಲೆಕ್ಟ್ರಾನಿಕ್ಸ್‌ ತಯಾರಿಕ ಕಂಪನಿಗಳು ತಮ್ಮ ವ್ಯವಹಾರಗಳನ್ನು ಚೀನಾದಿಂದಾಚೆಗೆ ಡೈವರ್ಸಿಫೈ ಮಾಡೋಕೆ ಮುಂದಾಗಿವೆ. ಈ ಹಿನ್ನಲೆಯಲ್ಲಿ Foxconn ಈಗಾಗ್ಲೆ ಭಾರತದಲ್ಲಿ ಐ-ಫೋನ್ಗಳನ್ನು ಅಸೆಂಬಲ್‌ ಮಾಡ್ತಿದ್ದು, 700 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 5.8 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ಏರ್ ಪೋರ್ಟ್‌ ಬಳಿಯ 300 ಎಕರೆ ಜಾಗದಲ್ಲಿ ತಯಾರಿಕ ಘಟಕ ನಿರ್ಮಿಸಲಿದೆ. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಅನೌನ್ಸ್‌ ಮಾಡಿತ್ತು.

-masthmagaa.com

Contact Us for Advertisement

Leave a Reply