ಹಮಾಸ್‌ ಜೊತೆ ಸೇರಿಕೊಂಡಿದೆಯಾ ಇರಾನ್?‌ ಹಮಾಸ್‌ ಹೇಳಿದ್ದೇನು?

masthmagaa.com:

ಹಮಾಸ್‌ ಉಗ್ರರ ದಾಳಿಯ ಹಿಂದೆ ಇರಾನ್‌ ಕೈವಾಡವಿದೆ ಅಂತ ಇಸ್ರೇಲ್‌ ಆರೋಪಿಸಿತ್ತು. ಇದೀಗ ಈ ಆರೋಪಕ್ಕೆ ಪುಷ್ಠಿ ಕೊಡುವಂತೆ, ಇಸ್ರೇಲ್‌ ಮೇಲಿನ ದಾಳಿಗೆ ಪ್ಲಾನ್‌ ಮಾಡೋಕೆ ಇರಾನ್‌ ಹೆಲ್ಪ್‌ ಮಾಡಿತ್ತು ಅಂತ ಹಮಾಸ್‌ ಸಂಘಟನೆಯ ಹಿರಿಯ ಸದಸ್ಯರು ಹೇಳಿದ್ದಾರೆ. ಇರಾನ್‌ನ ಪ್ರಬಲ ಮಿಲಿಟರಿ ಸೇನೆಯಾದ Islamic Revolutionary Guard Corps (IRGC) ಹಮಾಸ್‌ ಜೊತೆ ಕಳೆದ ಆಗಸ್ಟ್‌ನಿಂದ ವರ್ಕ್‌ ಮಾಡ್ತಿದೆ. ಇಸ್ರೇಲ್‌ ದಾಳಿ ಕುರಿತು ಹಲವಾರು ಸಭೆಗಳಲ್ಲಿ ಚರ್ಚೆ ಮಾಡಲಾಗಿದೆ. ಕನಿಷ್ಠ 2 ಸಭೆಗಳಲ್ಲಿ ಇರಾನ್‌ನ ವಿದೇಶಾಂಗ ಸಚಿವ ಹೊಸ್ಸೇನ್‌ ಅಮಿರ್‌ ಅಬ್ದುಲ್ಲಾಹಿನ್‌ ಭಾಗಿಯಾಗಿದ್ರು. ಅವರ ಜೊತೆ IRGC ಅಧಿಕಾರಿಗಳು ಹಾಗೂ ಇರಾನ್‌ ಬೆಂಬಲಿತ 4 ಉಗ್ರ ಸಂಘಟನೆಯ ಪ್ರತಿನಿಧಿಗಳು ಭಾಗಿಯಾಗಿದ್ರು ಅಂತ ಮಾಹಿತಿ ನೀಡಿದ್ದಾರೆ. ಇತ್ತ ಯುಎನ್‌ನಲ್ಲಿರೊ ಇರಾನ್‌ ಮಿಷನ್‌ನ ಅಧಿಕಾರಿ, ಗಾಜಾ ಪಟ್ಟಿಯಲ್ಲಿ ಹಮಾಸ್‌ ಸಂಘಟನೆಯ ಕ್ರಮಗಳನ್ನ ಸಪೋರ್ಟ್‌ ಮಾಡಿದ್ದೇವೆ. ಆದ್ರೆ ಅವ್ರಿಗೆ ಆ ರೀತಿ ಮಾಡುವಂತೆ ನಿರ್ದೇಶನ ನೀಡಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply