ಕೆಂಪು ಸಮುದ್ರದಲ್ಲಿ ಹೌತಿಗಳ ದಾಳಿಗೆ ಇರಾನ್‌ ಶ್ಲಾಘನೆ!

masthmagaa.com:

ಕೆಂಪು ಸಮುದ್ರದಲ್ಲಿ ಇಸ್ರೇಲ್‌ ಸಂಬಂಧಿತ ಹಡಗುಗಳ ಮೇಲಿನ ಹೌತಿಗಳ ದಾಳಿಯನ್ನ ಇರಾನ್‌ ಭದ್ರತಾ ಪಡೆ ಚೀಫ್‌ ಶ್ಲಾಘಿಸಿದ್ದಾರೆ. ಇರಾನ್‌ ಮೇಲೆ ಆರೋಪ ಮಾಡಲು ಯಾವುದೇ ಕಾರಣ ಇಲ್ಲ, ಅಲ್ಲದೆ ಪ್ಯಾಲೆಸ್ತೀನ್ ಪರ ಇರಾನ್‌ ನಿಂತಿದೆ ಅಂತ ಇರಾನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ನಾಸೀರ್‌ ಕನಾನಿ ಹೇಳಿದ್ದಾರೆ. ಇರಾನ್‌ ಸಪೊರ್ಟ್‌ನ್ನ ಪ್ಯಾಲೆಸ್ತೀನಿಯರಿಗೆ ನೀಡೊಕೆ ಹೆಮ್ಮೆಯಾಗುತ್ತೆ ಯಾಕಂದ್ರೆ ಅವ್ರು ತಮ್ಮ ನೆಲಕ್ಕಾಗಿ ಹೋರಾಡ್ತಿದ್ದಾರೆ ಅಂತ ತಿಳಿಸಿದ್ದಾರೆ. ಇನ್ನು ಕೆಂಪು ಸಮುದ್ರದ ದಾಳಿಯನ್ನ ಗಾಜಾದಲ್ಲಿ ಇಸ್ರೇಲ್‌ ಮಾನವೀಯ ನೆರವು ನೀಡೋವರೆಗೂ ನಾವ್‌ ಕಂಟಿನ್ಯೂ ಮಾಡ್ತಿವಿ ಅಂತ ಹೌತಿಗಳು ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply