ಸಿರಿಯಾ ಬಿಕ್ಕಟ್ಟನ್ನ ಚರ್ಚಿಸೋಕೆ ರಷ್ಯಾ, ಇರಾನ್‌ ಮತ್ತು ಟರ್ಕಿ ಸಭೆ!

masthmagaa.com:

ರಷ್ಯಾ-ಯುಕ್ರೇನ್‌ ಯುದ್ದ ಅಂತ್ಯಗೊಳ್ತಿಲ್ಲ. ಇದರ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇರಾನ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಸಿರಿಯಾ ಬಿಕ್ಕಟ್ಟಿನ ಕುರಿತು ಇರಾನ್‌ ಮತ್ತು ಟರ್ಕಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ ಅಂತ ವರದಿಯಾಗಿದೆ. ಸಿರಿಯಾದ 11 ವರ್ಷದ ಬಿಕ್ಕಟ್ಟನ್ನ ಬಗೆಹರಿಸೋಕೆ ʻಅಸ್ತಾನಾ ಪೀಸ್‌ ಪ್ರೋಸೆಸ್‌ʼನ ಭಾಗವಾಗಿ ಈ ವಿಷಯವನ್ನ ಚರ್ಚಿಸೋಕೆ ಈ ಮೂರು ದೇಶಗಳು ಭೇಟಿಯಾಗ್ತಿವೆ ಅಂತ ಗೊತ್ತಾಗಿದೆ. ಇನ್ನು ಟರ್ಕಿ ಅಧ್ಯಕ್ಷ ರೀಸಿಪ್‌ ತಾಯಿಪ್‌ ಎರ್ಡೋಗಾನ್‌, ಕುರ್ದಿಶ್ ಉಗ್ರರ ವಿರುದ್ದ ಉತ್ತರ ಸಿರಿಯಾದಲ್ಲಿ ಹೊಸ ಆಕ್ರಮಣ ಮಾಡೋದಾಗಿ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಈ ಸಭೆ ಕರೆಯಲಾಗಿದೆ.

-masthmagaa.com

Contact Us for Advertisement

Leave a Reply