‌ಭಾರತೀಯರಿದ್ದ ಅಮೆರಿಕದ ಆಯಿಲ್‌ ಟ್ಯಾಂಕರ್‌ನ್ನ ಸೀಜ್‌ ಮಾಡಿದ ಇರಾನ್!

masthmagaa.com:

ಅಮೆರಿಕ ಮೂಲದ ತೈಲ ಟ್ಯಾಂಕರ್‌ನ್ನ ಗಲ್ಫ್‌ ಆಫ್‌ ಒಮನ್‌ನಲ್ಲಿ ಇರಾನ್‌ನ ನೌಕಾಪಡೆ ಸೀಜ್‌ ಮಾಡಿದೆ. ಮಾಸ್ಕ್‌ ಧರಿಸಿದ ಇರಾನ್‌ನ ನೇವಿ ಕಮಾಂಡರ್‌ಗಳು ಹೆಲಿಕಾಪ್ಟರ್‌ ಮೂಲಕ ಆಯಿಲ್‌ ಟ್ಯಾಂಕರ್‌ನ್ನ ಸುತ್ತುವರಿದು ಸೀಜ್‌ ಮಾಡಿರೋದನ್ನ ಇರಾನ್‌ನ ಸರ್ಕಾರಿ ಟಿವಿ ಚಾನೆಲ್‌ನಲ್ಲಿ ತೋರಿಸಲಾಗಿದೆ. ಇನ್ನು ‘Advantage Sweet’ ಅನ್ನೊ ಅಮೆರಿಕ ಮೂಲದ ಟ್ಯಾಂಕರ್‌ನಲ್ಲಿರುವ 24 ಸಿಬ್ಬಂದಿ ಭಾರತಿಯರೇ ಅಂತ ಹೇಳಲಾಗಿದೆ. ಅಂದ್ಹಾಗೆ ಕಳೆದ ಕೆಲ ದಿನಗಳ ಹಿಂದೆ ಅಮೆರಿಕ ಇರಾನ್‌ನ ಆಯಿಲ್‌ ಟ್ಯಾಂಕರ್‌ನ್ನ ಸೀಜ್‌ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಇರಾನ್‌ ಅಮೆರಿಕದ ಆಯಿಲ್‌ ಟ್ಯಾಂಕರ್‌ನ್ನ ಸೀಜ್‌ ಮಾಡಿದೆ. ಇತ್ತ ಇರಾನ್‌ನ ಕ್ರಮಕ್ಕೆ ಪ್ರತಿಕ್ರಿಯಿಸಿರೋ ಅಮೆರಿಕ, ಪಾಶ್ಚಿಮಾತ್ಯ ದೇಶಗಳ ಕಚ್ಚಾ ತೈಲ ಸಾಗಣಿಕೆಯನ್ನ ಟಾರ್ಗೆಟ್‌ ಮಾಡಿ ಟ್ಯಾಂಕರ್‌ಗಳನ್ನ ಹಿಂದಿನಿಂದಲೂ ಇರಾನ್ ಸೀಜ್‌ ಮಾಡ್ತಿದೆ. ಕಳೆದ 2 ವರ್ಷಗಳಲ್ಲಿ ಇದು 5ನೇ ಟ್ಯಾಂಕರ್‌ ಆಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply