ಬ್ರಿಟನ್‌ ಮುಂದಿನ ಪ್ರಧಾನಿ ಪಟ್ಟ ಕರ್ನಾಟಕದ ಅಳಿಯ ರಿಷಿ ಸುನಾಕ್‌ಗೆ ಖಚಿತ? ಬೋರಿಸ್‌ ಸ್ಪರ್ಧೆಯಿಂದ ಔಟ್‌!

masthmgaa.com:

ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಕರೆಸಿಕೊಂಡಿದ್ದ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಸದ್ಯ ರಾಜಕೀಯ ಪರಿಸ್ಥಿತಿ ಅತಂತ್ರ ಸ್ಥಿತಿ ತಲುಪಿದ್ದು ಪ್ರಧಾನಿ ಕುರ್ಚಿ ಮತ್ತೆ ಖಾಲಿಯಾಗಿದೆ. ಲಿಜ್‌ಟ್ರಸ್‌ರಿಂದ ತೆರವಾಗಿರೋ ಸ್ಥಾನವನ್ನ ತುಂಬೋಕೆ ಆಡಳಿತರೂಢ ಕನ್ಸರ್ವೇಟಿವ್‌ ಪಕ್ಷದ ನಾಯಕರು ಇನ್ನಿಲ್ಲದ ತಯಾರಿ ನಡೆಸ್ತಿದ್ದಾರೆ. ಇದರ ನಡುವೆಯೇ ಈ ಪೈಪೋಟಿಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ನಿನ್ನೆಯವರೆಗೂ ಪ್ರಧಾನಿ ಪಟ್ಟದ ಪಬ್ರಲ ಆಕಾಂಕ್ಷಿ ಅಂತಿದ್ದ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಇದೀಗ ರೇಸ್‌ನಿಂದ ಹಿಂದೆ ಬಂದಿರೋದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀರ್ಘಕಾಲದಿಂದಲೂ ಪ್ರಧಾನಿ ಪಟ್ಟದ ಮೇಲೆ ಕಣ್ಣಾಕಿರೋ ಅಲ್ಲಿನ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್‌ರ ಕನಸು ಸಕಾರಗೊಳ್ಳುವ ಸಂದರ್ಭ ಬಂದಿದೆ. ಅಂದಹಾಗೆ ನಿನ್ನೆ ತಾನೇ ʻನನಗೆ 102 ಸಂಸದರ ಬೆಂಬಲ ಇದೆʼ ಅಂತ ಬೋರಿಸ್ ಹೇಳಿಕೊಂಡಿದ್ರು. ಆದರೆ ಇದು ಸೂಕ್ತ ಸಮಯವಲ್ಲ ಅನ್ನೋ ಕಾರಣಕ್ಕೆ ತಾವು ಈಗ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ರಿಷಿಯವರು ನಿನ್ನೆ ಟ್ವೀಟ್‌ ಮಾಡಿ ಅಧಿಕೃತವಾಗಿ ತಾವು ಪ್ರಧಾನಿ ಹುದ್ದೆಯ ಸ್ಪರ್ಧಿ ಅಂತ ಅನೌನ್ಸ್‌ ಮಾಡಿದ್ರು. ‘ಬ್ರಿಟನ್ ಒಂದು ದೊಡ್ಡ ದೇಶ. ಸದ್ಯ ನಾವು ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಕನ್ಸರ್ವೇಟಿವ್ ಪಕ್ಷದ ಮುಂದಾಳಾಗಿ ನಾನು ಬ್ರಿಟನ್‌ನ ಪ್ರಧಾನಿಯಾಗೋಕೆ ಇಚ್ಚಿಸುತ್ತೇನೆ. ಆ ಮೂಲಕ ಪ್ರಸ್ತುತ ಇರೋ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ಹೊಂದಿದ್ದೇನೆ ಅಂತ ಹೇಳಿದ್ರು. ಇನ್ನು ಈ ಪೈಪೋಟಿಗಳ ಮಧ್ಯೆದಲ್ಲಿಯೇ ಬೋರಿಸ್‌ ಹಾಗೂ ರಿಷಿ ಇಬ್ರೂ ಕೂಡ ಮಾತುಕತೆ ನಡೆಸಿದ್ರು. ಇದು ಫೇಲ್‌ ಆಗುತ್ತೆ ಅಂತ ಎಲ್ರೂ ಭಾವಿಸಿದ್ರು. ಯಾಕಂದ್ರೆ, ಬೋರಿಸ್‌ ಅವರು ಈ ಮುಂಚೆಯಿಂದಲೂ ಕೂಡ ಯಾರ್‌ ಬೇಕಾದ್ರೂ ಪಿಎಂ ಆಗಲಿ. ಆದ್ರೆ ರಿಷಿ ಮಾತ್ರ ಪಿಎಂ ಆಗೋದು ಬೇಡ. ಆಗೋಕೂ ಬಿಡಬಾರ್ದು ಅಂತ ಹೇಳ್ತಾ ಬಂದಿದ್ರು. ಲಿಜ್ ಟ್ರಸ್‌ ರಾಜೀನಾಮೆ ಕೊಟ್ಟ ಮೇಲೆ ರಿಷಿಗೆ ಚಾನ್ಸ್‌ ಕೊಡಬಾರ್ದು ಅಂತಲೋ ಏನೋ ಮತ್ತೆ ಪ್ರಧಾನಿ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ತೋರಿಸಿದ್ರು ಭೊರಿಸ್‌ ಜಾನ್ಸನ್. ಆದ್ರೆ ಈಗ ಈ ಇಬ್ಬರು ಎದುರಾಳಿಗಳ ಮಧ್ಯೆ ಮೀಂಟಿಂಗ್‌ ಆಗಿದೆ. ಅದು ಈಗ ಯಶಸ್ವಿ ಆಗಿರೋ ರೀತಿ ಕಾಣಿಸ್ತಿದೆ.‌ ಇದರ ಭಾಗವಾಗಿಯೇ ಬೋರಿಸ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇನ್ನೊಂದ್ಕಡೆ ಸ್ಪರ್ಧೆಯ ಮುಂಚೂಣಿಯಲ್ಲಿರುವ ಸುನಕ್‌ ಬೋರಿಸ್‌ ಜಾನ್ಸನ್‌ ಅವರಿಗಿಂತಲೂ ಹೆಚ್ಚಿನ ಸದಸ್ಯರ ಬೆಂಬಲ ಹೊಂದಿದ್ರು ಅಂತ ಮಾದ್ಯಮಗಳು ವರದಿ ಮಾಡಿವೆ. ರಿಷಿ ಸುನಾಕ್‌ ಪಸ್ತುತ 162 ಸದಸ್ಯರ ಬೆಂಬಲ ಪಡೆದಿದ್ದಾರೆ. ಇದು ಬೋರಿಸ್‌ಗಿಂತಲೂ ಹೆಚ್ಚಾಗಿದೆ. ಇನ್ನು ಪ್ರಧಾನಿ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಪೆನ್ನಿ ಮೋರ್ಡಾಂಟ್‌ 30 ಸದಸ್ಯರ ಬೆಂಬಲದೊಂದಿಗೆ ಸ್ಪರ್ಧೆಯಲ್ಲಿ ತುಂಬಾ ಹಿಂದೆ ಇದ್ದಾರೆ. ಈ ಪ್ರಧಾನಿ ಕುರ್ಚಿಯ ಮ್ಯಾಜಿಕಲ್‌ ಚೇರ್‌ ಆಟ ಇಂದೇ ಕೊನೇಯಾಗಬೋದು ಅಂತ ಹೇಳಲಾಗ್ತಿದ್ದು ಸದ್ಯದ ಬೆಳವಣಿಗೆಯ ಪ್ರಕಾರ ರಿಷಿ ಸುನಾಕ್‌ ಮುಂದಿನ ಬ್ರಿಟನ್‌ ಪ್ರಧಾನಿಯಾಗೋದು ಬಹುತೇಕ ಖಚಿತವಾಗಿದೆ. ಯಾರೇ ಬಂದ್ರೂ ಹಳ್ಳ ಹಿಡಿದಿರೋ ಬ್ರಿಟನ್‌ ಆರ್ಥಿಕತೆ ಅನ್ನೋ ದೊಡ್ಡ ರೈಲನ್ನ ಟ್ರಾಕ್‌ಗೆ ಎಳೆದುಕೊಂಡು ಬರೋದು ಅಷ್ಟು ಸುಲಭ ಇಲ್ಲ ಅನ್ನೋದನ್ನ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply