ಭೂಕಂಪನದ ಕೇಂದ್ರವಾಗ್ತಿದೆಯಾ ರಾಜ್ಯ? ಕೊಡಗು, ದಕ್ಷಿಣ ಕನ್ನಡದಲ್ಲಿ ಮತ್ತೆ ಭೂಕಂಪ!

masthmagaa.com:

ರಾಜ್ಯ ಇತ್ತೀಚೆಗ ಭೂಕಂಪ ಪೀಡಿತ ಪ್ರದೇಶ ಆಗ್ತಿದೆಯಾ ಅನ್ನೋ ಅನುಮಾನ ದಟ್ಟವಾಗ್ತಿದೆ. ಇದೀಗ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಗಡಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ಸಂಜೆ 4.01 ನಿಮಿಷಕ್ಕೆ ಚೆಂಬು, ಪೆರಾಜೆ, ಗೂನಡ್ಕ, ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ. ನೆನ್ನೆ ಕೂಡ ಇದೇ ಭಾಗದಲ್ಲಿ ಭೂಮಿ ಕಂಪಿಸಿರೋದಾಗಿ ವರದಿಯಾಗಿತ್ತು. ಇದು ಈ ಭಾಗದಲ್ಲಿ ನಡೆಯುತ್ತಿರುವ 9ನೇ ಕಂಪನವಾಗಿದೆ. ದೊಡ್ಡ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಮನೆಯಲ್ಲಿದ್ದವರು ಭಯದಿಂದ ಹೊರಗೋಡಿ ಬಂದಿದ್ದಾರೆಂದು ತಿಳಿದು ಬಂದಿದೆ. ನೆನ್ನೆ ಬೆಳಗ್ಗೆ 6.22ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಸುಳ್ಯ ತಾಲೂಕಿನ ಅರಂತೋಡು ಅಂತ ಕರ್ನಾಟಕ ಸ್ಟೇಟ್‌ ಡಿಸಾಸ್ಟರ್‌ ಮಾನಿಟರಿಂಗ್‌ ಸೆಂಟರ್‌ ಮಾಹಿತಿ ನೀಡಿತ್ತು. ಸುಮಾರು 30 ಸೆಕಂಡ್‌ ಕಂಪನದ ಅನುಭವವಾಗಿತ್ತು. ಕಂಪನದ ಪರಿಣಾಮ 1.8ರಷ್ಟು ಇತ್ತು.

-masthmagaa.com

Contact Us for Advertisement

Leave a Reply