ಯುಕ್ರೇನ್‌ ಯುದ್ಧದ ಅವಕಾಶ ಬಳಸಿಕೊಳ್ಳಿ: ಐಸಿಸ್‌ ಪ್ರತೀಕಾರ

masthmagaa.com:

ತನ್ನ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಖುರೇಷಿಯನ್ನ ಹತ್ಯೆ ಮಾಡಿದ್ಕೆ ಪ್ರತೀಕಾರ ತಗೋಳ್ಳೋದಾಗಿ ಜಾಗತಿಕ ಉಗ್ರ ಸಂಘಟನೆ ಐಎಸ್‌ ಪ್ರತಿಜ್ಞೆ ಮಾಡಿದೆ. ಈ ಸಂಬಂಧ ಐಎಸ್‌ ಗ್ರೂಪ್‌ಗೆ ಸಂಬಂಧಿತ ಆಡಿಯೋ ಕ್ಲಿಪ್‌ ಒಂದು ಟೆಲಿಗ್ರಾಂನಲ್ಲಿ ಓಡಾಡ್ತಾ ಇದ್ದು ಅದ್ರಲ್ಲಿ, ದೇವರ ಮೇಲೆ ಅವಲಂಬಿತರಾಗಿ, ಪ್ರತೀಕಾರ ತಗೋಳೋಕೆ ದಿವ್ಯ ಯಾತ್ರೆಯೊಂದನ್ನ ಶುರು ಮಾಡೋಕೆ ಅನೌನ್ಸ್‌ ಮಾಡ್ತಾ ಇದೀವಿ ಅಂತ ಇದೆ. ಇನ್ನು ಐಸಿಸ್‌ನ ಹೊಸ ವಕ್ತಾರ ಅಬು-ಓಮರ್‌ ಅಲ್-ಮುಹಾಜ್ಜಿರ್‌ ಕೂಡ ಇದೇ ರೀತಿ ಮಾತಾಡಿದ್ದು. ಶತ್ರುಗಳು ತಮ್ಮ ತಮ್ಮಲ್ಲೇ ಹೊಡೆದಾಡ್ಕೋತಾ ಇದಾರೆ, ಈ ಯುಕ್ರೇನ್‌ ಯುದ್ಧದ ಅವಕಾಶವನ್ನ ಉಪಯೋಗಿಸಿಕೊಳ್ಳಿ, ಯುರೋಪ್‌ನಲ್ಲಿ ಹೆಚ್ಚಿನ ದಾಳಿ ನಡೆಸಿ ಅಂತ ಐಎಸ್‌ ಬೆಂಗಲಿಗರಿಗೆ ಕರೆ ನೀಡಿದ್ದಾನೆ. ಕಳೆದ ಫೆಬ್ರುವರಿಯಲ್ಲಿ ಅಮೇರಿಕ ಸೇನೆ ಈ ಹಿಂದಿನ ಐಎಸ್‌ ಮುಖ್ಯಸ್ಥ ಇಬ್ರಾಹಿಂ ಮೇಲೆ ದಾಳಿ ಮಾಡಿದಾಗ ಆತ ತಾನೇ ಸ್ಫೋಟಿಸಿಕೊಂಡು ಸತ್ತಿದ್ದ.

-masthmagaa.com

Contact Us for Advertisement

Leave a Reply