ಏರ್‌ಡ್ರಾಪ್‌ನಿಂದ ಗಾಜಾದಲ್ಲಿ 5 ಮಂದಿ ಸಾವು, 10 ಮಂದಿಗೆ ಗಾಯ!

masthmagaa.com:

ಗಾಜಾದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳನ್ನ ಏರ್‌ಡ್ರಾಪ್‌ ಮಾಡೋ ವೇಳೆ ಕನಿಷ್ಠ 5 ಮಂದಿ ಮೃತಪಟ್ಟಿದ್ದು, 10 ಮಂದಿಗೆ ಗಾಯಗಳಾಗಿದೆ. ಅಗತ್ಯ ವಸ್ತುಗಳನ್ನ ಏರ್‌ಡ್ರಾಪ್‌ ಮಾಡ್ತಿರೋ ವೇಳೆ, ಪ್ಯಾಲೆಟ್‌ನ್ನ ನಿಧಾನವಾಗಿ ಕೆಳಗಿಳಿಸಬೇಕಾದ ಪ್ಯಾರಚೂಟ್‌ ಓಪನ್‌ ಆಗದೇ ಕೈಕೊಟ್ಟಿದೆ. ಸೋ, ಇದನ್ನ ಕಲೆಕ್ಟ್‌ ಮಾಡೋಕೆ ಅಂತ ಸೇರಿದ್ದ ಗಾಜಾ ಜನರ ಮೇಲೆ ಭಾರಿ ಪ್ಯಾಲೆಟ್‌ ಬಿದ್ದಿದೆ. ಪರಿಣಾಮ ಸಾವು ನೋವುಗಳು ಉಂಟಾಗಿದೆ. ಆದ್ರೆ ಜೋರ್ಡನ್‌ ಸೇನೆ ಮತ್ತು ಅಮೆರಿಕ ಈ ಏರ್‌ಡ್ರಾಪ್‌ ಮಾಡಿದ್ದು ನಾವಲ್ಲ ಅಂತ ಅವರ ಮೇಲೆ ಬಂದ ಆರೋಪವನ್ನ ನಿರಾಕರಿಸಿದೆ. ಇದರ ಬೆನ್ನಲ್ಲೇ ಬೆಲ್ಜಿಯಮ್‌, ಈಜಿಪ್ಟ್‌, ಫ್ರಾನ್ಸ್‌ ಮತ್ತು ನೆದರ್‌ಲ್ಯಾಂಡ್ಸ್‌ಗಳು ಕೊಡ್ತಿರೋ ಸಹಾಯದಿಂದ ಈ ಅನಾಹುತ ಆಗಿದೆ ಅಂತ ಆರೋಪ ಮಾಡಲಾಗ್ತಿದೆ. ಇನ್ನು ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಗಾಜಾ ಸರ್ಕಾರ ಏರ್‌ಡ್ರಾಪ್‌ನ್ನ ʻಯುಸ್‌ಲೆಸ್‌ʼ…ಪ್ರಯೋಜನಕ್ಕೆ ಬಾರದ್ದು ಅಂತ ಕರೆದಿದೆ. ಜೊತೆಗೆ ʻಇವೆಲ್ಲಾ ಮಾನವೀಯ ಸೇವೆಗಾಗಿ ಮಾಡ್ತಿರೋದಲ್ಲ….ಬದಲಿಗೆ ಪ್ರಚಾರಕ್ಕಾಗಿ ಮಾಡ್ತಿದ್ದಾರೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply