ಯುದ್ಧದಲ್ಲಿ ಇಸ್ರೇಲ್‌ ಹೊಸ ತಂತ್ರ! ತೀವ್ರಗೊಂಡ ಗಾಜಾ ಯುದ್ಧ!

masthmagaa.com:

ಅತ್ತ ಹೊಸ ವರ್ಷಕ್ಕೆ ಹೊಸ ಸ್ಟ್ರಾಟಜಿಯಿಂದ ಯುದ್ಧ ಕಂಟಿನ್ಯೂ ಮಾಡಿರೋ ಇಸ್ರೇಲ್‌, ಜನವರಿ 2 ರಂದು ಹಲವಾರು ಉಗ್ರರನ್ನ ಕೊಂದು ಹಾಕಿದೆ. ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಇಸ್ರೇಲ್‌ ಪಡೆಗಳು ಉಗ್ರರ ಹತ್ಯೆ ಮಾಡಿದ್ರೆ, ದಕ್ಷಿಣದಲ್ಲಿ ಇಸ್ರೇಲ್‌ ಏರ್‌ಕ್ರಾಫ್ಟ್‌ ಮತ್ತು ಟ್ಯಾಂಕರ್‌ಗಳು ದಾಳಿ ನಡೆಸಿವೆ. ಇನ್ನು ಗಾಜಾದ ಮಧ್ಯ ಭಾಗದಲ್ಲೂ ಯುದ್ಧ ತೀವ್ರವಾಗ್ತಿದ್ದು, ಅಲ್‌ ಬುರೇಜ್‌ ನಿರಾಶ್ರಿತರ ಕ್ಯಾಂಪ್‌ಗಳ ಮೇಲೂ ಟ್ಯಾಂಕರ್‌ಗಳಿಂದ ದಾಳಿ ನಡೆಸಲಾಗಿದೆ ಅಂತ ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ಇನ್ನು ಇದುವರೆಗೆ ಸುಮಾರು 22,000 ಪ್ಯಾಲಸ್ತೀನಿಯರು ಪ್ರಾಣ ಕಳೆದ್ಕೊಂಡಿದ್ದಾರೆ. ಇದ್ರ ಮಧ್ಯೆ ಈ ರೀತಿಯ ಹಿಂಸಾಚಾರಗಳು ಇನ್ನೂ ಹಲವು ತಿಂಗಳು ಕಾಲ ನಡೆಯಲಿದೆ, ಈ ಯುದ್ಧ ಅಷ್ಟು ಸುಲಭದಲ್ಲಿ ಸ್ಟಾಪ್‌ ಆಗಲ್ಲ ಅಂತ ಇಸ್ರೇಲಿ ಅಧಿಕಾರಿಗಳು ಹೇಳ್ತಿದ್ದಾರೆ.

ಇತ್ತ ಕೆಂಪು ಸಮುದ್ರದ ಆ್ಯಕ್ಸೆಸ್‌ ಪಡೆಯೋಕೆ ಇಥಿಯೋಪಿಯಾ – ಸೊಮಾಲಿಲ್ಯಾಂಡ್‌ ಮಧ್ಯೆ ನಡೆದಿರೋ ಡೀಲ್‌ನ್ನ ಇದೀಗ ಸೊಮಾಲಿಯಾ ರಿಜೆಕ್ಟ್‌ ಮಾಡಿದೆ. ʻಈ ಡೀಲ್‌ನಿಂದ ಸೊಮಾಲಿಯಾದ ಸಾರ್ವ ಭೌಮತ್ವ ಉಲ್ಲಂಘನೆಯಾಗುತ್ತೆ. ಸಂವಿಧಾನದ ಅಡಿಯಲ್ಲಿ ಸೊಮಾಲಿಲ್ಯಾಂಡ್‌, ಸೊಮಾಲಿಯಾದ ಒಂದು ಭಾಗವಾಗಿ ಉಳಿದ್ಕೊಂಡಿದೆʼ. ಹೀಗಂತ ಸೊಮಾಲಿಯಾ ಸರ್ಕಾರ ಹೇಳಿ ಇಥಿಯೋಪಿಯಾ ಮಾಡ್ಕೊಂಡ ಡೀಲ್‌ನ್ನ ತಿರಸ್ಕರಿಸಿದೆ. ಅಂದ್ಹಾಗೆ ಸೊಮಾಲಿಲ್ಯಾಂಡ್‌ನಲ್ಲಿರೋ ಬರ್ಬೆರಾ ಬಂದರಿನ ಆ್ಯಕ್ಸೆಸ್‌ ಪಡೆಯೋಕೆ ಇಥಿಯೋಪಿಯಾ ಅಗ್ರಿಮೆಂಟ್‌ಗೆ ಸೈನ್‌ ಮಾಡಿತ್ತು.

-masthmagaa.com

Contact Us for Advertisement

Leave a Reply