‌ʻಇಸ್ರೇಲ್‌ ನೇರ ಹೊಣೆʼ! ಮುಸ್ಲಿಂ ದೇಶಗಳ ಸಭೆ! ಸಿಡಿದ ಸೌದಿ ಪ್ರಿನ್ಸ್!

masthmagaa.com:

ಹಮಾಸ್‌ ಉಗ್ರರ ಏಕಾಏಕಿ ದಾಳಿಯಿಂದ ಕೆರಳಿರೋ ಇಸ್ರೇಲ್‌, ಗಾಜಾ ಪಟ್ಟಿ ಮೇಲಿನ ತನ್ನ ದಾಳಿಯನ್ನ ಕಂಟಿನ್ಯೂ ಮಾಡಿದೆ. ಗಾಜಾದಲ್ಲಿರೋ ದೊಡ್ಡ ಆಸ್ಪತ್ರೆ ಅಲ್‌ ಶಿಫಾ ಮೇಲೆ ಇಸ್ರೇಲ್‌ ಸೇನೆ ನಿರಂತರವಾಗಿ ಗುಂಡಿನ ದಾಳಿ ಮಾಡ್ತಿದೆ. ಈ ಕಾರಣಕ್ಕೆ ಆಸ್ಪತ್ರೆಯಲ್ಲಿ ವಿದ್ಯುತ್‌ ಸಂಪರ್ಕ ಕಟ್‌ ಆಗಿದ್ದು, ವೈದ್ಯಕೀಯ ಉಪಕರಣಗಳು ಕಾರ್ಯ ನಿರ್ವಹಿಸೋದನ್ನ ಸ್ಟಾಪ್‌ ಮಾಡಿವೆ. ಹೀಗಾಗಿ ಇಂಟೆನ್ಸಿವ್‌ ಕೇರ್‌ನಲ್ಲಿ ಇಡಲಾಗಿದ್ದ ರೋಗಿಗಳು ಪ್ರಾಣ ಕಳೆದುಕೊಳ್ತಿದ್ದಾರೆ. ಈಗಾಗಲೇ ಒಂದು ನವಜಾತ ಶಿಶು ಸೇರಿ 5 ಜನ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಹೊರಗೆ ಹಾಗೂ ಒಳಗೆ ಇರೋರ ಮೇಲೆ ಇಸ್ರೇಲ್‌ ಸೇನೆ ಗುಂಡಿನ ದಾಳಿ ಮಾಡ್ತಿದೆ. ಜೊತೆಗೆ ಆಸ್ಪತ್ರೆಯ ಕಾಂಪೌಂಡ್‌ನಲ್ಲಿ ಅಲುಗಾಡೋಕು ಬಿಡ್ತಿಲ್ಲ ಅಂತ ಅಲ್‌ ಶಿಫಾ ಹಾಸ್ಪಿಟಲ್‌ನ ಡೈರಕ್ಟರ್‌ ಮೊಹಮದ್‌ ಅಬು ಸೆಲ್ಮಿಯಾ ಹೇಳಿದ್ದಾರೆ.

ಇತ್ತ ಹಮಾಸ್‌-ಇಸ್ರೇಲ್‌ ಯುದ್ಧ ಹಾಗೂ ಮಿಡಲ್‌ ಈಸ್ಟ್‌ನಲ್ಲಿ ಉಂಟಾಗಿರೋ ಉದ್ವಿಗ್ನತೆ ಕುರಿತು ಚರ್ಚಿಸಲು ಇಂದು ಸೌದಿ ಅರೇಬಿಯಾದಲ್ಲಿ ಇಸ್ಲಾಮಿಕ್‌- ಅರಬ್‌ ಸಮಿಟ್‌ ನಡೆಸಲಾಗಿದೆ. ಈ ವೇಳೆ ಮಾತಾಡಿರುವ ಸೌದಿ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಪ್ಯಾಲಸ್ತೈನ್‌ ಜನರ ವಿರುದ್ಧ ಇಸ್ರೇಲ್‌ ಎಸಗಿರೋ ಅಪರಾಧಗಳಿಗೆ ಇಸ್ರೇಲ್‌ ನೇರ ಹೊಣೆ ಅಂತ ಹೇಳಿದ್ದಾರೆ. ಜೊತೆಗೆ ಗಾಜಾ ಪಟ್ಟಿ ಮೇಲಿನ ದಾಳಿಗಳನ್ನ ಕೂಡಲೇ ನಿಲ್ಲಿಸಬೇಕು ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನ ಸ್ಟಾಪ್‌ ಮಾಡ್ಬೇಕು. ಅಷ್ಟೆ ಅಲ್ದೆ ಒತ್ತೆಯಾಳುಗಳನ್ನ ರಿಲೀಸ್‌ ಮಾಡ್ಬೇಕು ಅಂತ ಸಲ್ಮಾನ್‌ ಕರೆ ನೀಡಿದ್ದಾರೆ. ಆದ್ರೆ ಈ ವೇಳೆ ಹಮಾಸ್‌ ಉಗ್ರರನ್ನ ಸಲ್ಮಾನ್‌ ಮೆನ್ಶನ್‌ ಮಾಡಿಲ್ಲ. ಇನ್ನು ಇದೇ ಸಭೆಯಲ್ಲಿ ಮಾತಾಡಿರುವ ಪ್ಯಾಲಸ್ತೈನ್‌ ಅಥಾರಿಟಿ ಪ್ರೆಸಿಡೆಂಟ್‌ ಮಹಮೌದ್‌ ಅಬ್ಬಾಸ್‌, ಪ್ಯಾಲಸ್ತೀನಿಯರು ಈ ಯುದ್ಧದಲ್ಲಿ ಅಸಾಧಾರಣ ನರಮೇಧಕ್ಕೆ ಒಳಗಾಗಿದ್ದಾರೆ. ಈ ಯುದ್ಧ ನಿಲ್ಲಿಸುವಂತೆ ಇಸ್ರೇಲ್‌ ಮೇಲೆ ಅಮೆರಿಕ ಒತ್ತಡ ಹೇರ್ಬೇಕು ಅಂತ ಒತ್ತಾಯಿಸಿದ್ದಾರೆ. ಅಲ್ದೆ ಇಸ್ರೇಲ್‌ ದಾಳಿ ಎದುರಿಸುತ್ತಿರೋ ಪ್ಯಾಲಸ್ತೈನ್‌ ಜನರಿಗೆ ಅಂತಾರಾಷ್ಟ್ರೀಯ ಭದ್ರತೆ ಅಗತ್ಯವಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply