ಇಸ್ರೇಲ್‌-ಅರಬ್‌ ದೋಸ್ತಿ? ಗಾಜಾದಲ್ಲಿ ಜಂಟಿ ಆಡಳಿತ?

masthmagaa.com:

ಗಾಜಾ ಪಟ್ಟಿಯಲ್ಲಿ ಹಮಾಸ್‌ ನಿರ್ಮೂಲನೆಯಾದ ಬಳಿಕ ಅಲ್ಲಿನ ಫ್ಯೂಚರ್‌ ಆಡಳಿತದ ಕುರಿತ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಹಮಾಸ್‌ ಉಗ್ರರನ್ನ ಫಿನಿಶ್‌ ಮಾಡಿದ ಬಳಿಕ ಗಾಜಾದ ಭವಿಷ್ಯದ ಬಗ್ಗೆ ಅರಬ್‌ ದೇಶಗಳ ಜೊತೆ ಮಾತುಕತೆ ನಡೆಸಲಾಗುತ್ತೆ ಅಂತ ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿ ಗಿಲಾಡ್‌ ಎರ್ಡಾನ್‌ ಹೇಳಿದ್ದಾರೆ. ಗಾಜಾದ ಆಡಳಿತದ ಬಗ್ಗೆ ಅರಬ್‌ ದೇಶಗಳ ಜೊತೆಗಿನ ಚರ್ಚೆ ಇನ್ನು ಸ್ಟಾರ್ಟ್‌ ಆಗಿಲ್ಲ. ಆದ್ರೆ ಮುಂದಿನ ದಿನಗಳನ್ನ ಅದನ್ನ ಪ್ರಾರಂಭಿಸಲಾಗುತ್ತೆ ಅಂತ ಎರ್ಡಾನ್‌ ಹೇಳಿದ್ದಾರೆ. ಇದೇ ವೇಳೆ ಸೌದಿ ಅರೇಬಿಯಾ ಹಾಗೂ ಗಲ್ಫ್‌ ರಾಷ್ಟ್ರಗಳು ಇಸ್ರೇಲ್‌ ಜೊತೆ ಸೇರಿ ಮಧ್ಯಂತರ ಆಡಳಿತ ನಡೆಸಬಹುದಾ ಅಂತ ಕೇಳಿದೆ ಪ್ರಶ್ನೆಗೆ ಎರ್ಡಾನ್‌ ಉತ್ತರಿಸಿದ್ದಾರೆ. ಈಗ ಇಲ್ಲಿ ಮೆನ್ಶನ್‌ ಮಾಡಲಾದ ಅರಬ್‌ ದೇಶಗಳಿಗೂ ಹಮಾಸ್‌ ಉಗ್ರರು ಶತ್ರುಗಳಾಗಿದ್ದಾರೆ. ಅಷ್ಟೆ ಅಲ್ದೆ ಅವ್ರು ಹಲವು ಮಾಡರೇಟ್‌ ಮುಸ್ಲಿಂ ರಾಷ್ಟ್ರಗಳ ಶತ್ರುಗಳೂ ಆಗಿದ್ದಾರೆ ಅಂತ ಎರ್ಡಾನ್‌ ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ಯುದ್ಧದ ಬಳಿಕ ಗಾಜಾ ಪಟ್ಟಿಯ ಆಡಳಿತ ಯಾರ ಕೈಗೆ ಸೇರುತ್ತೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗ್ತಿದೆ.

ಇತ್ತ ಅಚ್ಚರಿ ಬೆಳವಣಿಗೆಯೊಂದ್ರಲ್ಲಿ ಸೌದಿ ಅರೇಬಿಯಾದಲ್ಲಿ ಗಾಜಾ ಹಾಗೂ ಪ್ಯಾಲಸ್ತೀನ್‌ಗೆ ಸಪೋರ್ಟ್‌ ಮಾಡೋರನ್ನ ವಶಕ್ಕೆ ಪಡಿತಿದೆ ಅಂತ ವರದಿಯಾಗಿದೆ. ಮುಸ್ಲಿಂರ ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನದಲ್ಲಿ ಪ್ಯಾಲಸ್ತೀನ್‌ ಪರ ಪ್ರಾರ್ಥನೆ ಸಲ್ಲಿಸುತ್ತಿದ್ದೋರನ್ನ ವಶಕ್ಕೆ ಪಡೆಯಲಾಗ್ತಿದೆ ಅಂತ ಮಿಡಲ್‌ ಈಸ್ಟ್‌ ಐ ರಿಪೋರ್ಟ್‌ ಮಾಡಿದೆ. ಬ್ರಿಟನ್‌ನ ನಟ ಹಾಗೂ ನಿರೂಪಕ ಅಬ್ದುರ್‌ ರೆಹಮಾನ್‌ ಅವ್ರು ಮೆಕ್ಕಾಗೆ ತೆರಳಿದ್ದಾಗ ಪ್ಯಾಲಸ್ತೈನ್‌ ಫ್ಲಾಗ್‌ ಬಣ್ಣದ ಮಣಿಗಳ ಬ್ರೇಸ್‌ಲೆಟ್‌ ಹಾಗೂ ತಲೆಗೆ ವೈಟ್‌ ಸ್ಕಾರ್ಫ್‌ ಹಾಕಿದ್ದಕ್ಕೆ ಸೌದಿ ಅರೇಬಿಯಾ ಸೈನಿಕರು ವಶಕ್ಕೆ ಪಡೆದಿದ್ರು ಅಂತ ಗೊತ್ತಾಗಿದೆ. ಈ ಬಗ್ಗೆ ಸ್ವತಃ ಅಬ್ದುರ್‌ ಹೇಳಿಕೊಂಡಿದ್ದಾರೆ. ವಿಚಾರಣೆಗೆಂದು ನನ್ನನ್ನು ಕರೆದುಕೊಂಡು ಹೋಗಿದ್ದ ಸೈನಿಕರು, ಪ್ಯಾಲಸ್ತೈನ್‌ ಸ್ಕಾರ್ಫ್‌ ಹಾಕದಂತೆ ವಾರ್ನ್‌ ಮಾಡಿ ಕಳಿಸಿದ್ರು ಅಂತ ಹೇಳಿದ್ದಾರೆ. ಅಷ್ಟೆ ಅಲ್ದೆ ಅಲ್ಜೀರಿಯಾದ ವ್ಯಕ್ತಿಯೊಬ್ಬನ್ನನ್ನ ಕೂಡ ಪ್ಯಾಲಸ್ತೈನ್‌ಗಾಗಿ ಪಾರ್ಥನೆ ಮಾಡುವಾಗ ಬಂಧಿಸಲಾಗಿತ್ತು ಅಂತ ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಹಮಾಸ್‌ ಉಗ್ರರನ್ನ ನಾಶ ಮಾಡ್ತೀವಿ ಅಂತ ಶಪಥ ಮಾಡಿರೋ ಇಸ್ರೇಲ್‌ ಇಷ್ಟು ದಿನ ಗಾಜಾ ಪಟ್ಟಿಯಲ್ಲಿ ಮಾತ್ರ ದಾಳಿ ಮಾಡ್ತಿತ್ತು. ಇದೀಗ ವೆಸ್ಟ್‌ ಬ್ಯಾಂಕ್‌ಗೂ ತನ್ನ ಕಾರ್ಯಾಚರಣೆ ವಿಸ್ತರಿಸಿದ್ದು, ಅಲ್ಲಿನ ಬಲಾಟ ಅನ್ನೊ ನಿರಾಶ್ರಿತರ ಕ್ಯಾಂಪ್‌ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 5 ಜನ ಪ್ಯಾಲಸ್ತೀನಿಯರು ಮೃತಪಟ್ಟಿದ್ದಾರೆ ಅಂತ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ. ಇತ್ತ ಪ್ಯಾಲಸ್ತೀನ್‌ ಉಗ್ರ ಸಂಘಟನೆ ಇಸ್ಲಾಮಿಕ್‌ ಜಿಹಾದ್‌ಗೆ ಸೇರಿದ ಭಾರೀ ಶಸ್ತ್ರಾಸ್ತ್ರ ತುಂಬಿರೋ ಎರಡು ಟ್ರಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ. ಅಲ್ದೆ ಉತ್ತರ ಗಾಜಾದ ಕಿಂಡರ್‌ಗಾರ್ಟನ್‌ ಹಾಗೂ ಎಲಿಮೆಂಟರಿ ಸ್ಕೂಲ್‌ಗಳಲ್ಲಿ ಮಾರ್ಟರ್‌ ಶೆಲ್ಸ್‌, ಸ್ಫೋಟಕ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಅಂತ ಇಸ್ರೇಲ್‌ ಸೇನೆ ತಿಳಿಸಿದೆ. ಜೊತೆಗೆ ಕಿಂಡರ್‌ಗಾರ್ಟನ್‌ಗಳು ಮಕ್ಕಳ ಆಟ ಸಾಮಾನು ಇಡೋಕೆ ಬಳಸಬೇಕೆ ಹೊರತು ಈ ರೀತಿ ಭಯಂಕರ ಶಸ್ತ್ರಾಸ್ತ್ರಗಳನ್ನ ಸ್ಟೋರ್‌ ಮಾಡೋಕೆ ಅಲ್ಲ ಅಂತ ಇಸ್ರೇಲ್‌ ಕಿಡಿಕಾರಿದೆ. ಅತ್ತ ಲೆಬನಾನ್‌ನ ಉಗ್ರಸಂಘಟನೆ ಹೆಜ್ಬೊಲ್ಲಾ ಕಡೆಯಿಂದ ಇಸ್ರೇಲ್‌ ಮೇಲಿನ ದಾಳಿ ಮುಂದುವರೆದಿದೆ. ಇದೀಗ ಲೆಬನಾನ್‌ನಿಂದ ಲಾಂಚ್‌ ಮಾಡಲಾಗಿದ್ದ ಮಿಸೈಲ್‌ ಒಂದನ್ನ ಸಕ್ಸಸ್‌ಫುಲ್‌ ಆಗಿ ತಡೆಯಲಾಗಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ.

ಈ ಕಡೆ ಇಸ್ರೇಲ್‌, ಗಾಜಾದ ಆಸ್ಪತ್ರೆ ಅಲ್‌ ಶಿಫಾದಲ್ಲಿನ ತನ್ನ ಕಾರ್ಯಾಚರಣೆ ಮುಂದುವರೆಸಿದೆ. ಇದರ ಪರಿಣಾಮ ಆಸ್ಪತ್ರೆಯಲ್ಲಿ ಆಕ್ಸಿಜನ್‌, ಇಂಧನ ಹಾಗೂ ಇತರ ಬೇಸಿಕ್‌ ಸಪ್ಲೈಗಳ ಕೊರತೆ ಉಂಟಾಗಿದೆ. ಇದ್ರಿಂದಾಗಿ ಕಳೆದ 48 ಗಂಟೆಗಳಲ್ಲಿ 24 ಜನ ಪೇಷಂಟ್ಸ್‌ ಮೃತಪಟ್ಟಿದ್ದಾರೆ ಅಂತ ಪ್ಯಾಲಸ್ತೀನ್‌ ಆರೋಗ್ಯ ಸಚಿವಾಲಯ ಹೇಳಿದೆ. ಇನ್ನು ಇದೆಲ್ಲದರ ನಡುವೆ ಗಾಜಾ ಪಟ್ಟಿಗೆ ಮೊದಲ ಬಾರಿಗೆ ಇಂಧನ ಪೂರೈಕೆ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರ ಮನವಿ ಮೇರೆಗೆ ಎರಡು ಟ್ಯಾಂಕರ್‌ ಇಂಧನವನ್ನ ಪೂರೈಸಲಾಗಿದೆ ಅಂತ ಇಸ್ರೇಲ್‌ ಹೇಳಿದೆ.
ಅತ್ತ ಹಮಾಸ್‌- ಇಸ್ರೇಲ್‌ ಯುದ್ಧದ ಕುರಿತು ಮತ್ತೊಮ್ಮೆ ಮಾತಾಡಿರೋ ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೋಆನ್‌ ಇಸ್ರೇಲ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಾರ್ಥನಾ ಸ್ಥಳ, ಚರ್ಚ್‌ಗಳು, ಆಸ್ಪತ್ರೆಗಳ ಮೇಲೆಲ್ಲಾ ಇಸ್ರೇಲ್‌ ದಾಳಿ ನಡೆಸ್ತಿದೆ. ಈ ರೀತಿ ಆಸ್ಪತ್ರೆಗಳ ಮೇಲೆ ದಾಳಿ ಮಾಡೋದು ಹಾಗೂ ಮಕ್ಕಳನ್ನ ಹತ್ಯೆ ಮಾಡೋದು ಟೋರಾದಲ್ಲಿ ಬರೆದಿಲ್ಲ. ನೀವದನ್ನ ಮಾಡೋಕೆ ಸಾಧ್ಯವಿಲ್ಲ ಅಂತ ಏರ್ಡೋಆನ್‌ ಕಿಡಿಕಾರಿದ್ದಾರೆ. ಅಂದ್ಹಾಗೆ ಟೋರಾ ಅಂದ್ರೆ ಯಹೂದಿಗಳ ಪವಿತ್ರ ಗ್ರಂಥ. ಹೀಬ್ರೂ ಬೈಬಲ್‌ನ ಮೊದಲ ಐದು ಪುಸ್ತಕಗಳ ಕಲೆಕ್ಷನ್‌ನ್ನೇ ಇವ್ರು ಟೋರಾ ಅಂತ ಕರೀತಾರೆ.

ಈ ನಡುವೆ ಹಮಾಸ್‌- ಇಸ್ರೇಲ್‌ ಯುದ್ಧದಲ್ಲಿ ಉಂಟಾಗ್ತಿರೋ ವಾರ್‌ ಕ್ರೈಮ್‌ ಕುರಿತು ತನಿಖೆ ನಡೆಸಬೇಕು ಅಂತ ಜಾಗತಿಕವಾಗಿ ಆಗ್ರಹ ಕೇಳಿ ಬಂದಿದೆ. ಸೌತ್‌ ಆಫ್ರಿಕಾ, ಬಾಂಗ್ಲಾದೇಶ, ಬೊಲಿವಿಯಾ, ಕೊಮೊರೊಸ್‌ ಮತ್ತು ಜಿಬೌಟಿಗಳು ಪ್ಯಾಲಸ್ತೀನ್‌ನಲ್ಲಿನ ಪರಿಸ್ಥಿತಿ ಕುರಿತು ತನಿಝೆ ನಡೆಸಬೇಕು ಅಂತ International Criminal Court(ICC)ನ್ನ ಒತ್ತಾಯಿಸಿವೆ ಅಂತ ICC ಚೀಫ್‌ ಪ್ರಾಸಿಕ್ಯುಟರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply